ಬೆಂಗಳೂರು: ಮಾರಕ ಕೊರೊನಾ ಸೋಂಕಿನ ವಿರುದ್ಧ ಪ್ರಧಾನಿ ಮೋದಿ ಕರೆಗೆ ಬೆಂಬಲಿಸಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ದಂಪತಿ ಹಾಗೂ ಕುಟುಂಬ ಸಮೇತ ದೀಪ ಬೆಳಗಿಸಿದರು.
ಕೊರೊನಾ ಅಂಧಕಾರದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ರಾತ್ರಿ 9 ಗಂಟೆ 9 ನಿಮಿಷಕ್ಕೆ ಈಡೀ ದೇಶವೇ ದೀಪ, ಟಾರ್ಚ್ ಬೆಳಗಿಸುವ ಮೂಲಕ ಮೋದಿ ಕರೆಗೆ ಸಾಕ್ಷಿಯಾದರು.
ಅದೇ ರೀತಿ ಕಿಚ್ಚ ಸುದೀಪ್ ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸದ ಬಾಲ್ಕನಿಯಲ್ಲಿ ಕೂತು ಎರಡು ಕೈಗಳಲ್ಲಿ ಮೇಣದ ಬತ್ತಿ ಪ್ರದರ್ಶಿಸಿದರು. ನಟ ಅನಿರುದ್ಧ ಕೂಡಾ ಪತ್ನಿಯೊಂದಿಗೆ ದೀಪ ಬೆಳಗಿದರು.