ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ವಿಷಯ ತಿಳಿದು ವಿಕ್ರಮ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ದೌಡಾಯಿಸಿದ್ದಾರೆ. ಸಿಎಂ ಆಗಮನಗದ ಬೆನ್ನಲ್ಲೇ ನಟ ರವಿಚಂದ್ರನ್, ಯಶ್ ಹಾಗೂ ಸಹೋದರ ಶಿವರಾಜ್ ಕುಮಾರ್ ಸಹ ಆಗಮಿಸಿದ್ದಾರೆ. ಜೊತೆಗೆ ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್, ನಟಿ ಶೃತಿ, ನಟ ದರ್ಶನ್, ನಿರ್ದೇಶಕ ತರುಣ್, ನಟ ಮುರುಳಿ ಆಗಮಿಸಿದ್ದಾರೆ.