ETV Bharat / state

ರಾಗಿಣಿ, ಸಂಜನಾ, ರವಿಶಂಕರ್, ಖನ್ನಾ ಆದಾಯದ ಮೂಲಕ್ಕೆ ಕೈ ಹಾಕಿದ ಸಿಸಿಬಿ - Sanjana

ರಾಗಿಣಿ, ಸಂಜನಾ, ರವಿಶಂಕರ್ ಹಾಗೂ ವಿರೇನ್ ಖನ್ನಾ ಆದಾಯ ಮೂಲಕ್ಕೆ ಸಿಸಿಬಿ ಕೈ ಹಾಕಿದ್ದು, ನಟಿ ಸಂಜನಾ ಡ್ರಗ್ಸ್ ಖರೀದಿಗೆ ಬಳಸಿದ್ದ ಬ್ಯಾಂಕ್ ಅಕೌಂಟ್ ಡಿಟೈಲ್‌ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ.

CCB
ಸಿಸಿಬಿ
author img

By

Published : Oct 18, 2020, 11:52 AM IST

Updated : Oct 18, 2020, 12:36 PM IST

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿರುವ ನಟಿಮಣಿಯರು‌ ಜೈಲು ಸೇರಿ ಒಂದು ವೇಳೆ ಜಾಮಿನು ಪಡೆದು ಹೊರಬಂದ್ರು ನಟಿಮಣಿಯರಿಗೆ ಸಂಕಷ್ಟ‌ ತಪ್ಪಿದ್ದಲ್ಲ. ರಾಗಿಣಿ, ಸಂಜನಾ, ರವಿಶಂಕರ್ ಹಾಗೂ ವಿರೇನ್ ಖನ್ನಾ ಆದಾಯ ಮೂಲಕ್ಕೆ ಸಿಸಿಬಿ ಕೈ ಹಾಕಿದ್ದು, ಸದ್ಯ ಸಿಸಿಬಿ ಕಚೇರಿಯಲ್ಲಿ ಒಬ್ಬೊಬ್ಬರ ಆದಾಯದ ಮೂಲದ ಲೆಕ್ಕವನ್ನೂ ಹಾಕ್ತಿದ್ದಾರೆ.

ಸ್ಯಾಂಡಲ್ ವುಡ್​ನ ನಟಿಮಣಿ ಸಂಜನಾ ಡ್ರಗ್ಸ್ ಖರೀದಿಗೆ ಬಳಸಿದ್ದ ಬ್ಯಾಂಕ್ ಅಕೌಂಟ್ ಡೀಟೇಲ್ಸ್​​​​​‌ ಸಿಸಿಬಿ ಕೈಗೆ ಸಿಕ್ಕಿದೆ.‌ 7 ಬ್ಯಾಂಕ್ ಅಕೌಂಟ್​ನಲ್ಲಿ 70 ಲಕ್ಷ ‌ಹಣ ವಹಿವಾಟು ಮಾಡಿದ್ದಾರೆ. ‌ಹಾಗಾದ್ರೆ ಯಾವ್ಯಾವ ಬ್ಯಾಂಕ್ ಅಲ್ಲಿ ವಹಿವಾಟು ನಡೆಸಿದ್ದಾರೆ ಅನ್ನೋ‌ ಮಾಹಿತಿ ನೋಡುವುದಾದರೆ ನೈಜೀರಿಯಾ ಪ್ರಜೆಯ ಜೊತೆ ಲಕ್ಷಾಂತರ ರೂಪಾಯಿ ವಹಿವಾಟನ್ನು ಆಕ್ಸಿಸ್​ ಬ್ಯಾಂಕ್, ಐಸಿಐಸಿಐ, ಎಸ್‌ಬಿಐ, ಇಂಡಿಯನ್ ಬ್ಯಾಂಕ್, ಕೊಟೊಕ್​ ಮಹೀಂದ್ರ, ಎಚ್​ಡಿಎಫ್​ ಬ್ಯಾಂಕ್​ನಲ್ಲಿ ಲಕ್ಷಾಂತರ ವ್ಯವಹಾರ ಮಾಡಿದ್ದಾರೆ. ಅಷ್ಟೇ ಅಲ್ಲ ಗೂಗಲ್ ಪೇ, ಫೋನ್ ಪೇಯಿಂದ ಕೂಡ ವಹಿವಾಟು ನಡೆದಿರುವ ವಿಚಾರ ಬಯಲಾಗಿದೆ.

ಇನ್ನು ರಾಗಿಣಿ ಆಪ್ತ ರವಿಶಂಕರ್ ಬ್ಯಾಂಕ್ ನಲ್ಲಿ 30 ಲಕ್ಷಕ್ಕೂ‌ಹೆಚ್ಚು ನಗದು ಪತ್ತೆಯಾಗಿದೆ. ರವಿಶಂಕರ್ ಅಕೌಂಟ್​ಗೆ ಫೋನ್ ,ಪೇ, ಗೂಗಲ್ ಪೇ ಮೂಲಕವೇ ಲಕ್ಷ ಲಕ್ಷ ಹಣ ಬಂದಿದೆ. ಹಾಗೆ ರಾಗಿಣಿ ಹಾಗೂ ರವಿಶಂಕರ್ ಇಬ್ಬರು ಒಂದೇ ಅಕೌಂಟ್ ಬಳೆಕೆ‌ ಮಾಡುತ್ತಿರುವ ಮಾಹಿತಿ ಕೂಡ ಸಿಕ್ಕಿದ್ದು, ಸದ್ಯ ರಾಗಿಣಿಯ ಇತರ ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ. ಸದ್ಯ ರಾಗಿಣಿ ಹೆಸರಲ್ಲಿ ಯಾವೆಲ್ಲಾ ಅಕೌಂಟ್ ಇದೆ ಅನ್ನೋ ಪತ್ತೆ ಕಾರ್ಯದಲ್ಲಿ ಸಿಸಿಬಿ ತೊಡಗಿದೆ. ರಾಗಿಣಿ ವ್ಯವಹಾರ ಇನ್ನು ಅಷ್ಟೊಂದು ಮಾಹಿತಿ ಲಭ್ಯವಾಗಿಲ್ಲ.

ಸದ್ಯ ಬಂಧನವಾಗಿರೋ ಆರೋಪಿಗಳ ಆದಾಯ ಮೂಲವನ್ನ ಆಡಿಟರ್​ಗಳ ಮೂಲಕ ಸಿಸಿಬಿ ಪತ್ತೆ ಹಚ್ಚಲು ಮುಂದಾಗಿದೆ. ಸದ್ಯ ಸಿಸಿಬಿ ಕಚೇರಿಯಲ್ಲಿ ಬಂಧಿತರ ರಾಶಿ ರಾಶಿ ದಾಖಲೆ ಮುಂದಿಟ್ಟು ಆಡಿಟ್ ಅನ್ನ ಆಡಿಟರ್ಸ್ ಮಾಡ್ತಿದ್ದಾರೆ. ಹಣದ ‌ಮಾಹಿತಿ ಕಲೆ ಹಾಕಿದ ನಂತರ ಇಡಿಗೆ ಕೂಡ ವ್ಯವಹಾರ ‌ಮಾಹಿತಿ ನೀಡಲಿದ್ದಾರೆ. ಈಗಾಗಲೇ ಇಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದೆ. ಡ್ರಗ್ ಕೇಸಲ್ಲಿ ನಟಿಮಣಿಯರು ಆಪ್ತರು ಹೊರಬಂದರೂ ಕೂಡ ಮತ್ತೆ ಇಡಿ ತನಿಖೆ ‌ಎದುರಿಸುವುದು ಅನಿವಾರ್ಯವಾಗಿದೆ.

Last Updated : Oct 18, 2020, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.