ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಮತ್ತೆ ಮೂವರು ವಿದೇಶಿ ಪೆಡ್ಲರ್ಗಳು ಇದ್ದಾರೆ ಎಂಬ ಶಂಕೆಯನ್ನು ಸಿಸಿಬಿ ವ್ಯಕ್ತಪಡಿಸಿದೆ.
ಈಗಾಗಲೇ ಸಿನಿತಾರೆಯರಿಗೆ, ಉದ್ಯಮಿ ಹಾಗೂ ರಾಜಕಾರಣಿಗಳ ಮಕ್ಕಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಲೂಮ್ ಪೆಪ್ಪರ್, ಬೆನಾಲ್ಡ್, ಒಸೈ ಎಂಬ ಮೂವರು ಆರೋಪಿಗಳನ್ನು ಸಿಸಿಬಿ ಸೆರೆಹಿಡಿದಿದೆ. ನೈಜೀರಿಯನ್ ಪ್ರಜೆಗಳು ಟೂರಿಸ್ಟ್, ಸ್ಟೂಡೆಂಟ್ ವೀಸಾ ಮೂಲಕ ನಗರಕ್ಕೆ ಬಂದು ವಿದ್ಯಾಭ್ಯಾಸದ ಬಳಿಕ ಹಣದ ಆಸೆಗೆ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವೀಸಾ, ಪಾಸ್ಪೋರ್ಟ್ ಅವಧಿ ಮುಗಿದಿದ್ರೂ ನಗರದಲ್ಲಿ ಇದ್ದಕೊಂಡು ಅಕ್ರಮ ಚಟುವಟಿಕೆ ನಡೆಸಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಲೂಮ್ ಪೆಪ್ಪರ್ ಹಾಗೂ ಬೆನಾಲ್ಡ್ ಉಡ್ಡೇನ ಜೊತೆ ಮೂವರು ನೈಜೀರಿಯನ್ ಪ್ರಜೆಗಳು ಸೇರಿ ಹೈ ಎಂಡ್ ಪಾರ್ಟಿ, ರೇವ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂಬ ಆರೋಪವಿದೆ. ಇವರಿಗಾಗಿ ಸಿಸಿಬಿ ಕೊತ್ತನೂರು, ಹೆಣ್ಣೂರು, ಮಾದನಾಯಕನಹಳ್ಳಿ, ವಿದ್ಯಾರಣ್ಯಪುರ, ಟಿಸಿ ಪಾಳ್ಯ ಸೇರಿದಂತೆ ನಗರದಾದ್ಯಂತ ಹುಡುಕಾಟ ನಡೆಸುತ್ತಿದೆ. ಲೂಮ್ ಪೆಪ್ಪರ್ಗೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಸಂಪರ್ಕ ಇತ್ತು ಎಂಬ ಆರೋಪವಿದೆ. ಮತ್ತೊಬ್ಬ ಆರೋಪಿ ಬೆನಾಲ್ಡ್ ಉಡ್ಡೇನ್, ವೈಭವ್ ಜೈನ್, ವಿರೇನ್ ಖನ್ನಾ, ಆದಿತ್ಯಾ ಆಳ್ವರೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಇದೆ.