ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವನ ಸಹೋದರಿ ಪ್ರಿಯಾಂಕಾ ಆಳ್ವಾಗೆ ಸಿಸಿಬಿ ನೋಟಿಸ್ ನೀಡಲು ಕಾರಣ ಇದೀಗ ಬಹಿರಂಗವಾಗಿದೆ. ಅಷ್ಟೇ ಅಲ್ಲ ಮುತ್ತಪ್ಪ ಪುತ್ರ ರಿಕ್ಕಿ ವಿಚಾರಣೆಗೂ ಕಾರಣ ಗೊತ್ತಾಗಿದೆ.
ಸಿಸಿಬಿ ಮೂಲಗಳ ಮಾಹಿತಿ ಪ್ರಕಾರ, ಪೊಲೀಸರು ಆದಿತ್ಯ ಆಳ್ವನನ್ನು ಹುಡುಕುತ್ತಿರುವಾಗ ಸಹೋದರಿ ಪ್ರಿಯಾಂಕಾ ಜೊತೆ ಆದಿತ್ಯ ಆಳ್ವ ಸಂಪರ್ಕದಲ್ಲಿದ್ದರು. ಅನೇಕ ಬಾರಿ ಪ್ರಿಯಾಂಕಾ ನಂಬರ್ನಿಂದ ಅಪರಿಚಿತ ನಂಬರ್ಗಳ ಜೊತೆ ಸಂಭಾಷಣೆ ನಡೆದಿದೆ. ಅದರಲ್ಲೂ ಮುಂಬೈನಿಂದ ಬೆಂಗಳೂರಿನ ನಂಬರ್ಗಳಿಗೆ ಕರೆಗಳು ಬಂದಿವೆ ಎಂದು ಹೇಳಲಾಗ್ತಿದೆ.
ಅಷ್ಟೇ ಅಲ್ಲದೆ, ಮುತ್ತಪ್ಪ ರೈ ಮಗ ರಿಕ್ಕಿ ರೈ ಶಿಷ್ಯನ ನಂಬರ್ಗೆ ಎರಡು ಬಾರಿ ಕರೆ ಬಂದಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಆಗ ಆದಿತ್ಯ ಬೆನ್ನಿಗೆ ರಿಕ್ಕಿ ನಿಂತಿರುವ ಬಗ್ಗೆ ಸುಳಿವು ಸಿಕ್ಕ ಕಾರಣ ರಿಕ್ಕಿ ಮನೆಗೆ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಿ ವಿಚಾರಣೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅಲ್ಲದೇ ಪ್ರಿಯಾಂಕಾ ಆಳ್ವಗೆ ಈಗಾಗಲೇ ಎರಡು ಬಾರಿ ನೊಟೀಸ್ ಕೊಟ್ಟಿದ್ದು, 3ನೇ ಸಲ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಸ್ಯಾಂಡಲ್ವುಡ್ನಲ್ಲಿ ಇದೆ ಎನ್ನಲಾದ ಡ್ರಗ್ಸ್ ಮಾಫಿಯಾ ಬೆಳಕಿಗೆ ಬಂದಾಗ ಮುತ್ತಪ್ಪ ರೈ ಮಗ ರಿಕ್ಕಿ ರೈ ಮನೆಯಲ್ಲಿ ಆದಿತ್ಯ ಆಳ್ವ ಇರೋದು ಸಿಸಿಬಿಗೆ ತಿಳಿದಿತ್ತು. ಆದರೆ ಇದೇ ವೇಳೆ ಬೆಂಗಳೂರಿನಿಂದ ಪರಾರಿಯಾಗಲು ಸಿಟಿ ಸೂಪರ್ ಕಾಪ್ಗಳು ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ. ಎಫ್ಐಆರ್ ದಾಖಲಾದ ದಿನ ಬೆಂಗಳೂರಿನಲ್ಲಿಯೇ ಆದಿತ್ಯ ಆಳ್ವ ಇದ್ದಿದ್ದು, ಎಫ್ಐಆರ್ ಆಗಿ 2 ದಿನ ರಿಕ್ಕಿ ರೈ ಮನೆಯಲ್ಲಿ ಆಶ್ರಯ ಪಡೆದಿದ್ದ. ಪೊಲೀಸರು ಬಂಧಿಸುತ್ತಾರೆ ಅನ್ನೋ ಮಾಹಿತಿ ಆದಿತ್ಯಗೆ ಸಿಕ್ಕ ಬಳಿಕ ಮುಂಬೈಗೆ ತೆರಳಿ ಕೆಲ ದಿನಗಳ ಕಾಲ ನಟ ವಿವೇಕ್ ಓಬೆರಾಯ್ ಮನೆಯಲ್ಲಿ ಆಶ್ರಯ ಪಡೆದಿದ್ದನಂತೆ. ಅಲ್ಲಿಯೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಆದಿತ್ಯ ಅಲ್ಲಿಂದಲೂ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ರಿಕ್ಕಿ ರೈ ಆರೋಪಿಗೆ ಆಶ್ರಯ ಕೊಟ್ಟಿರುವ ಆರೋಪ ಇದ್ದರೂ, ವಿಚಾರಣೆ ನಡೆಸಿ ಬಿಟ್ಟಿರುವ ಕಾರಣವೇನು ಅನ್ನೋದೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.