ಬೆಂಗಳೂರು: ಉದ್ಯಾನನಗರಿಯಲ್ಲಿ ಮಹಾಮಾರಿ ಕೊರೊನಾ ಮತ್ತೊಂದು ಬಲಿ ಪಡೆದಿದೆ. ಇದೀಗ ಹೇರ್ ಸಲೂನ್ ಮಾಲೀಕ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಶಿವನಗರ ವಾರ್ಡ್‌ನ 45 ವರ್ಷದ ಸೋಂಕಿತ ಜ್ವರದಿಂದ ಬಳಲುತ್ತಿದ್ದರು. ಕಳೆದ 1 ವಾರದ ಹಿಂದೆ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಹಲವರಿಗೆ ಹೇರ್ ಕಟ್ಟಿಂಗ್ ಮಾಡಿದ್ದು, ಇದೀಗ ಶಾಪ್ಗೆ ಹೋಗಿದ್ದವರಲ್ಲಿ ಆತಂಕ ಹೆಚ್ಚಿದೆ.
ಶಿವಾಜಿನಗರದ ಎಇಇಗೆ ತಗುಲಿದ ಸೋಂಕು...
ಬಿಬಿಎಂಪಿ ಸಿಬ್ಬಂದಿಗೆ ಬೆನ್ನು ಹತ್ತಿರುವ ಕೊರೊನಾ ಮಹಾಮಾರಿ ಈಗ ಎಇಇಗೂ ತಗುಲಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಿವಾಜಿ ನಗರದ ಘನತ್ಯಾಜ್ಯ ನಿರ್ವಹಣೆ ಎಇಇಗೆ, ವಿಶೇಷ ಆಯುಕ್ತ ರಂದೀಪ್ ಪಿಎಗೆ ಸೋಂಕು ತಗುಲಿದ್ದು, ಬಿಬಿಎಂಪಿ ಅಧಿಕಾರಿಗಳಿಗೂ ನಡುಕ ಶುರುವಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಗೂ ಕಾಲಿಟ್ಟ ಕೊರೊನಾ!
ಬಿಬಿಎಎಂಪಿಯಲ್ಲಿನ ಐಎಎಸ್ ಅಧಿಕಾರಿಯ ಸಹಾಯಕನಿಗೆ ಸೋಂಕು ತಗುಲಿದ ಪರಿಣಾಮ ಆ ಅಧಿಕಾರಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.