ETV Bharat / state

ಸಮಾಜದಲ್ಲಿ ನೋವು-ಅಪಮಾನ ಉಂಡವರು, ಛಲದಿಂದ ಮುಂದೆ ಸಾಧಕರಾಗುತ್ತಾರೆ: ಸಿದ್ದರಾಮಯ್ಯ

author img

By

Published : Jul 16, 2022, 8:48 PM IST

ಜಾತಿ ಪದ್ಧತಿಗಳನ್ನು ವಿರೋಧಿಸಿ ಅನೇಕ ಕಾಲದಿಂದ ಬಸವಾದಿ ಶರಣರು ಹೋರಾಡುತ್ತಾ ಬಂದಿದ್ದರು, ಇನ್ನೂ ಇದನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಜಾತಿ ಪದ್ಧತಿಯನ್ನು ಪೋಷಿಸುತ್ತಿರುವ ಜನರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Rudrappa Mhangavadi's autobiography 'Ranada Gani' book launch
ರುದ್ರಪ್ಪ ಹಣಗವಾಡಿ ಅವರ ಆತ್ಮಕಥೆ ಬಿಡುಗಡೆ

ಬೆಂಗಳೂರು: ಸಮಾಜದಲ್ಲಿ ನೋವು ಹಾಗೂ ಅಪಮಾನವನ್ನ ಅನುಭವಿಸಿದ ವ್ಯಕ್ತಿಯಲ್ಲಿ ಛಲ ಹೆಚ್ಚಾಗಿ ಅದು ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಡಿ ಕೃಷತಪ್ಪ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ರುದ್ರಪ್ಪ ಹಣಗವಾಡಿ ಅವರ ಆತ್ಮಕಥೆ 'ಋಣದ ಗಣಿ' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಾಮಾನ್ಯವಾಗಿ ದಲಿತರು ಊರಿನ ಹೊರ ಭಾಗದಲ್ಲಿಯೇ ಇರುತ್ತಾರೆ. ಅದು ಸಮಾಜದ ಅಂತರವನ್ನು ತೋರುತ್ತದೆ. ಇನ್ನು, ಹಿಂದಿನ ಕಾಲದಲ್ಲಿ ಹೆಚ್ಚು ಅವಿದ್ಯಾವಂತರು ಇದ್ದರು. ಜಾತಿಗಳ ನಂತರದ ನಡುವೆಯೂ ಸಾಮರಸ್ಯ ಇತ್ತು. ಆದರೆ, ಇಂದು ಹೆಚ್ಚು ವಿದ್ಯಾವಂತರು ಇದ್ದರೂ, ಜಾತಿ ಪದ್ಧತಿ ಎಲ್ಲರಲ್ಲೂ ಸಮಸ್ಯೆ ತಂದಿಡುತ್ತಿದೆ. ಇದಕ್ಕೆ ಕಾರಣ ಜಾತಿ ಪದ್ಧತಿಯಲ್ಲಿ ಇರುವ ಜಡತ್ವ. ಜಾತಿ ಪದ್ಧತಿಗಳನ್ನು ವಿರೋಧಿಸಿ ಅನೇಕ ಕಾಲದಿಂದ ಬಸವಾದಿ ಶರಣರು ಹೋರಾಡುತ್ತಾ ಬಂದಿದ್ದರು, ಇನ್ನೂ ಇದನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಜಾತಿ ಪದ್ಧತಿಯನ್ನು ಪೋಷಿಸುತ್ತಿರುವ ಜನರು ಎಂದು ಹೇಳಿದರು.

ಸಾಮರಸ್ಯದಲ್ಲಿ ಭಾವನೆಗಳು, ಸಂಬಂಧ ಗಟ್ಟಿಯಾಗುತ್ತದೆ. ಆದರೆ, ಅದನ್ನು ಜಾತಿಯಿಂದ ಬೇರೆ ಮಾಡುವ ಕಾರ್ಯ ನಮ್ಮ ಸಮಾಜದಲ್ಲಿ ನಡೆಯುತ್ತಲೇ ಬರುತ್ತಿದೆ. ಅದನ್ನೆಲ್ಲ ಮೀರಿ ಸರಿ ತಪ್ಪುಗಳನ್ನು ಅರಿತು, ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಬದುಕು ಸಾರ್ಥಕ ಮಾಡಿಕೊಳ್ಳಲು ಸಾಧ್ಯ. ಆ ಕೆಲಸವನ್ನು ರುದ್ರಪ್ಪ ಮಾಡಿದ್ದಾರೆ. ಎಲ್ಲ ಸಮಾಜದ ಜನರನ್ನು ಸಮನಾಗಿ ನೋಡಿ ಎಲ್ಲರಲ್ಲೂ ಪ್ರೀತಿಯಿಂದ ಇದ್ದರು ಎಂದು ಈ ಕೃತಿ ಸಾಬೀತು ಮಾಡುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಕಾಲ ಹಲವಾರು ಸಮುದಾಯದಲ್ಲಿ ಅಕ್ಷರಕ್ಕೆ ತೆರೆದುಕೊಂಡವರು ಕೇವಲ ಬೆರಳೆಣಿಕೆಯಷ್ಟು. ಇಂದು ಶಿಕ್ಷಣ ಎಲ್ಲರಿಗೂ ಸಿಗುತ್ತಿದೆ. ಆದರೆ, ಅವರು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಾರೆ ಎಂದು ನೋಡಬೇಕು. ಪ್ರಮುಖವಾಗಿ ಶಿಕ್ಷಣಕ್ಕೆ ತೆರೆದುಕೊಂಡವರು ಕಣ್ಣು ಕಿವಿ ನೆನಪುಗಳನ್ನು ಕಳೆದುಕೊಂಡು, ಅಸಮಾನತೆಗೆ ಸಾಥ್​​ ನೀಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಮತ್ತೆ ನಾವು ಹಲವಾರು ವರ್ಷ ಹಿಂದೆ ಹೋಗುತ್ತಿದ್ದೇವೆ. ಇಂತಹ ಅನೇಕ ವಿಷಯ ಆಧರಿಸಿ ತಮ್ಮ ಜೀವನದ ಅನುಭವವನ್ನು ಮನ ಮುಟ್ಟುವಂತೆ 'ಋಣದ ಗಣಿ' ಕೃತಿಯಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.

ಸಾಹಿತಿ ಕೆ. ಮರುಳ ಸಿದ್ದಪ್ಪ, ವಿಮರ್ಶಕ ಕೆ. ವೈ. ನಾರಾಯಣ ಸ್ವಾಮಿ, ಡಿ ಕೃಷತಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಮತ್ತಿತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.