ಬೆಂಗಳೂರು: ವಕೀಲ ಜಗದೀಶ್ ಮಹಾದೇವ್ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿಯಾಗಿದೆ. ಅದನ್ನೇ ಸಲ್ಲಿಸಿ ಕಾನೂನು ಪದವಿ ಪಡೆದಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ವೆಂಕಟೇಶ ಎಂಬುವರು ನಗರದ ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಾರತ-ರಷ್ಯಾ ಮಧ್ಯೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು
ಜಗದೀಶ್ ನಕಲಿ ಅಂಕಪಟ್ಟಿ ಪಡೆದಿರುವ ವಿಷಯ ಫೇಸ್‌ಬುಕ್ ಸ್ನೇಹಿತನಿಂದ ತಿಳಿಯಿತು. ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಪಡೆದು ಪರಿಶೀಲಿಸಿದಾಗ ಅದು ಉದಯಪುರದ ರಾಜಸ್ಥಾನ ವಿದ್ಯಾಪೀಠದಿಂದ ನೀಡಿರುವುದು ತಿಳಿದುಬಂದಿದೆ ಎಂದು ವೆಂಕಟೇಶ ದೂರಿನಲ್ಲಿ ಹೇಳಿದ್ದಾರೆ.
600ಕ್ಕೆ 388 ಅಂಕ ಗಳಿಸಿರುವುದನ್ನು ಮಾರ್ಕ್ಸ್ ಕಾರ್ಡ್ ನಲ್ಲಿ ಉಲ್ಲೇಖಿಸಲಾಗಿದೆ. ರಾಜಸ್ಥಾನ ವಿದ್ಯಾಪೀಠವು ರಾಜಸ್ಥಾನ ಎಜುಕೇಷನ್ ಬೋರ್ಡ್‌ನಿಂದ ಯಾವುದೇ ಮಾನ್ಯತೆಗಳಿಸಿಲ್ಲ ಎಂದು ವೆಂಕಟೇಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ.