ETV Bharat / state

10 ಲಕ್ಷ ಹಣ ನನ್ನದೇ.. ದುಡ್ಡಿನ ಹಿಂದೆ ಯಾವ ಸಚಿವರ ಪಾತ್ರವಿಲ್ಲ: ಜಗದೀಶ್ ಸ್ಪಷ್ಟನೆ

ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದೇನೆ. ನ್ಯಾಯಾಲಯವು ಜಾಮೀನು ನೀಡಿದೆ. ಇದು ಅಕ್ರಮ ಹಣವಲ್ಲ. ಇದು ನನ್ನ ಸ್ವಂತ ಹಣ. ಮಾಹಿತಿ ಕೊರತೆಯಿಂದಾಗಿ ತಪ್ಪಾಗಿ ಅರ್ಥೈಸಿ ಪೊಲೀಸರು ವಶಕ್ಕೆ ಪಡೆದಿದ್ದರು - ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಜಗದೀಶ್‌ ಹೇಳಿಕೆ.

Engineer Jagadeesh Reaction
ಜಗದೀಶ್‌
author img

By

Published : Jan 6, 2023, 9:03 PM IST

Updated : Jan 6, 2023, 9:39 PM IST

ಹಣ ಪತ್ತೆ ಪ್ರಕರಣ : ಜಗದೀಶ್ ಸ್ಪಷ್ಟನೆ ನೀಡಿರುವುದು..

ಬೆಂಗಳೂರು: ವಿಧಾನಸೌಧದಲ್ಲಿ 10 ಲಕ್ಷ ರೂ. ನಗದು ಪತ್ತೆಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆರೋಪಿ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಜಗದೀಶ್‌ಗೆ 1ನೇ ಮೆಯೋ ಹಾಲ್ ಕೋರ್ಟ್‌ನಿಂದ ಜಾಮೀನು ಸಿಕ್ಕಿದೆ. ಆರೋಪಿ ಜಗದೀಶ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೆಯೋಹಾಲ್ ಕೋರ್ಟ್ ಮುಂದೆ ಜಗದೀಶ್ ಅವರನ್ನು ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಗಂಭೀರ ಅಪರಾಧ ಸ್ವರೂಪವಲ್ಲದ ಪ್ರಕರಣವಾಗಿರುವುದರಿಂದ ಜಗದೀಶ್‌ಗೆ ಜಾಮೀನು ಮಂಜೂರು ಮಾಡಿದೆ.

ಹಣ ಪತ್ತೆ ಪ್ರಕರಣ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಜಗದೀಶ್ ಅವರನ್ನು ಗುರುವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಹಣದ ಮೂಲದ ಬಗ್ಗೆ ಜಗದೀಶ್ ಇನ್ನೂ ಸುಳಿವು ಕೊಟ್ಟಿಲ್ಲ. ವಿಚಾರಣೆ ವೇಳೆ ಸಮಂಜಸವಾದ ಉತ್ತರ ನೀಡಿರಲಿಲ್ಲ. ಈ ಸಂಬಂಧ ಪೊಲೀಸರು ಬಂಧಿಸಿದ್ದರು‌. ಆದರೆ, ಜಗದೀಶ್ ವಿರುದ್ಧ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಹಣ ತಂದಿದ್ದರು. ಆ ಸಂದರ್ಭದಲ್ಲೇ ತುರ್ತಾಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ಹಣದ ಸಮೇತ ವಿಧಾನಸೌಧಕ್ಕೆ ಹೋಗಿದ್ದರು ಎಂದು ಆರೋಪಿ ಜಗದೀಶ್ ಪರ ವಕೀಲ ರಾಜು ಅವರ ವಾದವಾಗಿದೆ.

ಜಗದೀಶ್ ಹೇಳಿದ್ದೇನು?: ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದೇನೆ. ನ್ಯಾಯಾಲಯವು ಜಾಮೀನು ನೀಡಿದೆ. ಇದು ಅಕ್ರಮ ಹಣವಲ್ಲ. ಇದು ನನ್ನ ಸ್ವಂತ ಹಣ. ಮಾಹಿತಿ ಕೊರತೆಯಿಂದಾಗಿ ತಪ್ಪಾಗಿ ಅರ್ಥೈಸಿ ಪೊಲೀಸರು ವಶಕ್ಕೆ ಪಡೆದಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಕೋರ್ಟ್ ಮೂಲಕ ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಲವು ಜನರಿಂದ ಹಣ ಸಂಗ್ರಹಿಸಿಕೊಂಡು ತಂದಿದ್ದೆ.

ಕೆಲಸ ಮುಗಿಸಿಕೊಂಡು ಮಂಡ್ಯಕ್ಕೆ ಹಿಂತಿರುಗಿಸಬೇಕಾಗಿತ್ತು. ತುರ್ತಾಗಿ ಇಲಾಖೆಯ ಯೋಜನೆವೊಂದರಲ್ಲಿ ಎಸ್ಟಿಮೇಟ್‌ವೊಂದರ ಕಾರ್ಯ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ವಿಕಾಸ ಸೌಧಕ್ಕೆ ಹೊರಟಿದ್ದೆ. ಆದರೆ, ಆ ದಿನ ತಡವಾದ ಹಿನ್ನೆಲೆಯಲ್ಲಿ ಮತ್ತೆ ಹಿಂತಿರುಗಿದೆ. ಆ ವೇಳೆ ವಿಧಾನಸೌಧದಲ್ಲಿ ಭದ್ರತೆಗಿದ್ದ ಪೊಲೀಸರು ನನ್ನ ಬ್ಯಾಗ್ ಪರಿಶೀಲಿಸಿದರು. ನಾನು ಹೆಚ್ಚಾಗಿ ಕಾರಿನಲ್ಲೇ ಬರುತ್ತೇನೆ.

ಅಷ್ಟೊಂದು ಹಣ ತೆಗೆದುಕೊಂಡು ಹೋಗಬಾರದು ಎಂಬುದು ನನಗೆ ತಿಳಿದಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದೇ ಕೈಯಲ್ಲೇ ಹಣವಿದ್ದ ಬ್ಯಾಗ್ ತೆಗೆದುಕೊಂಡು ಹೋದೆ. ಪೊಲೀಸರು ಉದ್ದೇಶಪೂರ್ವಕವಾಗಿ ಬಂಧಿಸಿದ್ದರು. ಮಾಧ್ಯಮಗಳಲ್ಲಿ ಪ್ರಚಾರ ಹೆಚ್ಚಾಯಿತು. ಹಣದ ಹಿಂದೆ ಯಾವ ಸಚಿವರ ಪಾತ್ರವಿಲ್ಲ ಎಂದು ಸ್ಪಷ್ಪಪಡಿಸಿದರು.

ಹಣ ಪತ್ತೆ ಪ್ರಕರಣ: ಬುಧವಾರ ವಿಕಾಸಸೌಧಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಬ್ಯಾಗ್​ನಲ್ಲಿ 10 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು. ಹಣ ಹಾಗೂ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 'ಭದ್ರತಾ ಸಿಬ್ಬಂದಿಯ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಜಗದೀಶ್ ಅವರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಣ ತಂದಿದ್ದು, ಸೂಕ್ತ ದಾಖಲಾತಿ ನೀಡಲು ಸಮಯಾವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ‘‘ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದರು.

ಪರ್ಸಂಟೇಜ್ ಹುಟ್ಟು ಹಾಕಿದವರೇ ಕಾಂಗ್ರೆಸ್​ನವರು: ವಿಧಾನಸೌಧ ದ್ವಾರದ ಬಳಿ ಯಾವುದೋ ಒಬ್ಬ ಇಂಜಿನಿಯರ್ ದುಡ್ಡು ತೆಗೆದುಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದೆ. ಆತ ಎಲ್ಲಿಗೆ, ಯಾರಿಗೆ ಕೊಡಲು ಅಷ್ಟೊಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಇದ್ದರೂ ಶಿಕ್ಷೆ ಕೊಡುವ ಕೆಲಸ ನಾವು ಮಾಡುತ್ತೇವೆ. ಆದರೆ, ನಮ್ಮ ವಿರುದ್ಧ ಆರೋಪಿಸುವ ಸಿದ್ದರಾಮಯ್ಯ ಅವರು ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕ ಪ್ರಕರಣ ಏನಾಯಿತು ಅಂತಾ ನೆನಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿಧಾನಸೌಧದ ಗೋಡೆ ಗೋಡೆಯಲ್ಲೂ ಭ್ರಷ್ಟಾಚಾರ ಇದೆ ಎಂದು ಹೇಳುತ್ತಾರೆ. ಇವರು ಇದ್ದಾಗ ವಿಧಾನಸೌಧದ ಗೋಡೆ, ಆಫೀಸ್ ನಿಂತಲ್ಲಿ ಕುಂತಲ್ಲಿ ಎಲ್ಲ ಕಡೆ ಭ್ರಷ್ಟಾಚಾರದ್ದೇ ಪಿಸು ಮಾತು. ನಮಗೆ 40 ಪರ್ಸಂಟೇಜ್ ಅಂತಾರಲ್ಲ, ಪರ್ಸಂಟೇಜ್ ಹುಟ್ಟು ಹಾಕಿದ್ದೆ ಅವರು. ಇದಕ್ಕೆ ಸಾಕ್ಷಿ ಪುರಾವೆ ಇವೆ. ಕೆಲವೊಂದು ಕಡೆ 40 ಪರ್ಸಂಟೇಜ್ ಮೀರಿದ ದಾಖಲೆ ಇದೆ. 10 ಲಕ್ಷಕ್ಕೆ 40 ಪರ್ಸಂಟೇಜ್ ಅಂದರೆ, ಅವರ 25 ಲಕ್ಷಕ್ಕೆ ಎಷ್ಟಾಯ್ತು? ಎಂದು ಸಿಎಂ ಪ್ರಶ್ನಿಸಿದರು.

ಸಿ ಸಿ ಪಾಟೀಲ್ ಸ್ಪಷ್ಟನೆ: ಸಚಿವ ಸಿ ಸಿ ಪಾಟೀಲ್ ಮಾತನಾಡಿ, ನನಗೇ ಹಣ ಕೊಡಬೇಕು ಎಂದಿದ್ದರೆ, ವಿಧಾನಸಭೆಯಲ್ಲಿ ಯಾಕೆ ಕೊಡಬೇಕು? ಬೇರೆ ಕಡೆ ಕೊಡಬಹುದಲ್ಲವೇ? ನನಗೆ ಕೊಡಲು ವಿಧಾನಸೌಧಕ್ಕೆ ಯಾಕೆ ಬರಬೇಕು? ಪೊಲೀಸರು ಈ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದ್ದರು.

ಇದನ್ನೂ ಓದಿ: ವಿಕಾಸಸೌಧಕ್ಕೆ ಆಗಮಿಸಿದ ಲೋಕೊಪಯೋಗಿ ಎಂಜಿನಿಯರ್ ಬ್ಯಾಗ್​ನಲ್ಲಿ 10 ಲಕ್ಷ ಹಣ ಪತ್ತೆ: ಪ್ರಕರಣ ದಾಖಲು

Last Updated : Jan 6, 2023, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.