ETV Bharat / state

ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ, ನಿಷೇಧಾಜ್ಞೆ ಜಾರಿ - ಬೆಂಗಳೂರು ಸುದ್ದಿ

ಆರ್​ಆರ್​ ನಗರ ಚುನಾವಣೆ ಸಮೀಪಿಸುತ್ತಿದ್ದು, ಅಕ್ಟೋಬರ್​ 29ರಿಂದ ನವೆಂಬರ್​ 12ರವರೆಗೆ 144 ಸೆಕ್ಷನ್​ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

144 ಸೆಕ್ಷನ್ ಆದೇಶ ಹೊರಡಿಸಿದ ನಗರ ಆಯುಕ್ತ
144 ಸೆಕ್ಷನ್ ಆದೇಶ ಹೊರಡಿಸಿದ ನಗರ ಆಯುಕ್ತ
author img

By

Published : Oct 9, 2020, 3:55 PM IST

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ಅಕ್ಟೋಬರ್​ 29 ರಿಂದ ನವೆಂಬರ್​ 12ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾಯ್ದೆ ಜಾರಿಯಾಗಲಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಕಚೇರಿ ನಂ.211ರಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಸದ್ಯ ಕೊರೊನಾ ಸೋಂಕು ಇರುವ ಕಾರಣ ಆಯಾ ಅಭ್ಯರ್ಥಿಗಳ ಬೆಂಬಲಿಗರು ಕೋವಿಡ್​ ನಿಯಮ ಉಲ್ಲಂಘಿಸಿ ಕಚೇರಿ ಬಳಿ ಗುಂಪು ಸೇರುವುದು, ರಸ್ತೆ ತಡೆ, ಮೆರವಣಿಗೆ ಮುಂತಾದ ಘಟನೆಗಳು ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವ ಕಚೇರಿ ಸುತ್ತ 100 ಮೀಟರ್ ವ್ಯಾಪ್ತಿಗೆ ಪ್ರತಿಬಂಧಕಾಜ್ಞೆಯನ್ನ ಜಾರಿ ಮಾಡಲಾಗಿದೆ.

ಒಂದು ವೇಳೆ 144 ಸೆಕ್ಷನ್ ಉಲ್ಲಂಘನೆ ಮಾಡಿ 5 ಅಥವಾ ಅದಕ್ಕಿಂತ ಹೆಚ್ವು ಜನ ಸೇರಿದರೆ, ಮೆರವಣಿಗೆ ಮತ್ತು ಸಭೆ, ಮಾರಕಾಸ್ತ್ರ ಪ್ರತಿಕೃತಿ ದಹನ ಸೇರಿ ಸಮಾಜಘಾತುಕ ಕೆಲಸ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.