ETV Bharat / state

ಲಾಕ್ ಡೌನ್ ನಡುವೆಯೂ ಫೀಲ್ಡಿಗಿಳಿದ ಹಂತಕರು: ರೌಡಿ ಶೀಟರ್​ ಬರ್ಬರ ಹತ್ಯೆ..! - ರೌಡಿ ಶೀಟರ್​ ಬರ್ಬರ ಹತ್ಯೆ

ಲಾಕ್ ಡೌನ್ ಮಧ್ಯೆಯೂ ರಾಜಧಾನಿಯಲ್ಲಿ ರೌಡಿಗಳ ಕಾಳಗ ಮುಂದುವರೆದಿದ್ದು, ಹಳೇ ದ್ವೇಷದ ಹಿನ್ನೆಲೆ ರೌಡಿ ಶೀಟರ್​ ಒಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

Rowdy Sheeter Murder  in Bengaluru
Rowdy Sheeter Murder in Bengaluru
author img

By

Published : Apr 13, 2020, 7:34 AM IST

ಬೆಂಗಳೂರು: ಲಾಕ್ ಡೌನ್ ನಡುವೆಯೂ ಅಟ್ಟಹಾಸ ಮೆರೆದಿರುವ ಹಂತಕರು, ರೌಡಿ ಶೀಟರೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಮುಕುಂದ ಆಲಿಯಾಸ್ ಕರಿಹಂದಿ ಕೊಲೆಯಾದ ರೌಡಿಶೀಟರ್. ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಆಟೋರಾಮನ ಶಿಷ್ಯನಾಗಿದ್ದ ಮುಕುಂದ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದ್ದವು. ಹಳೇ ದ್ವೇಷದ ಹಿನ್ನೆಲೆ ಹಂತಕರು ಪೊಲೀಸ್ ಬಂದೋಬಸ್ತ್ ನಡುವೆಯೂ ಫೀಲ್ಡ್ ಗಿಳಿದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.