ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಶಾಸಕರ ಭವನದಲ್ಲಿ ದುಂಡು ಮೇಜಿನ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ದೇಶ ಗಂಡಾಂತರ ಪರಿಸ್ಥಿತಿಯಲ್ಲಿದ್ದು ದೇಶದಲ್ಲಿ ಸಂವಿಧಾನ ಇದೆಯಾ ಅನ್ನೋ ಸಂಶಯ ಶುರುವಾಗಿದೆ ಎಂದರು.
ಈಗಾಗಲೇ ದೇಶದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇದರ ಅವಶ್ಯಕತೆಯಾದ್ರೂ ಏನಿದೆ..? ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕೊಡಬೇಕಿದೆ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ನಲ್ಲಿ ಜಾರಿ ಮಾಡಿಸಲಾಗಿದೆ. ಈ ದೇಶದ ಸಮಸ್ತ ಜನರಿಗೆ ಈ ಕಾಯ್ದೆ ಸರಿಯಿದೆಯಾ ಇಲ್ವಾ ಅನ್ನೋ ಕುರಿತು ಪ್ರತಿಭಟಿಸುವ ಹಕ್ಕಿದೆ. ಆದರೆ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.
ಹೀಗಾಗಿ ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಜಾರಿ ಮಾಡಿರುವ 144 ಸೆಕ್ಷನ್ ಸರ್ಕಾರ ಹಿಂಪಡೆಯಬೇಕು. ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದರು. ದೇಶ ಬಹಳ ವಿಷಮ ಪರಿಸ್ಥಿತಿಯಲ್ಲಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.