ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ರೋಷನ್ ಬೇಗ್ಗೆ ವಿಚಾರಣಾಧೀನ ಕೈದಿಯಾಗಿ 8823 ನಂಬರ್ ನೀಡಲಾಗಿದೆ.
ಈ ನಡುವೆ ಬೇಗ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲಿನ ವೈದ್ಯಾಧಿಕಾರಿ ಡಾ. ಉಮಾ ಅವರು ರೋಷನ್ ಬೇಗ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಷನ್ ಬೇಗ್ ಈ ಹಿಂದೆ ಹಾರ್ಟ್ ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಪಟ್ಟಿದ್ದರು. ಹೀಗಾಗಿ ಮೆಡಿಕಲ್ ಡಯೆಟ್ನಲ್ಲಿದ್ದು, ಬಿಪಿ, ಶುಗರ್, ಹೃದಯ ಸಂಬಂಧಿ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದಾರೆ ಎನ್ನಲಾಗ್ತಿದೆ.