ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಒಂದೆಡೆ ಅನಾರೋಗ್ಯ ಎದುರಿಸುತ್ತಿರುವ ರೋಷನ್ ಬೇಗ್ ಅವರನ್ನು ಮತ್ತೆ ಕಷ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಮಾಜಿ ಸಚಿವ ರೋಷನ್ ಬೇಗ್ರನ್ನು ಕಸ್ಟಡಿಗೆ ನೀಡುವಂತೆ ಕೋರ್ಟ್ಗೆ ಇಂದು ಅರ್ಜಿ ಸಲ್ಲಿಸಲು ಸಿಬಿಐ ತಂಡ ನಿರ್ಧರಿಸಿದೆ.
ಕಳೆದ ಭಾನುವಾರ ರೋಷನ್ ಬೇಗ್ ಅವರನ್ನು ಬಂಧಿಸಲಾಗಿತ್ತು. ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ, ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಐಎಂಎ ಮಾಲಿಕ ಮನ್ಸೂರ್ ಖಾನ್ನಿಂದ ರೋಷನ್ ಬೇಗ್ 400 ಕೋಟಿ ರೂಪಾಯಿ ಪಡೆದ ಆರೋಪವಿದ್ದು, ಸದ್ಯ ಈ ಸಂಬಂಧ ರೋಷನ್ ಬೇಗ್ ಮನೆ ಮೇಲೆ ದಾಳಿ ಕೂಡ ನಡೆಸಲಾಗಿತ್ತು. ಹೀಗಾಗಿ ಈ ವಂಚನೆ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಮತ್ತೊಮ್ಮ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.
ಒಂದು ವೇಳೆ, ಅನಾರೋಗ್ಯ ಹಿನ್ನೆಲೆ ಜೈಲಿಗೆ ತೆರಳಿ ಬೇಗ್ ವಿಚಾರಣೆ ನಡೆಸಿ ಎಂದು ನ್ಯಾಯಾಲಯ ಆದೇಶ ನೀಡಿದರೆ, ಪರಪ್ಪನ ಅಗ್ರಹಾರ ಜೈಲಲ್ಲಿ ಸಿಬಿಐ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಬೇಕಾಗುತ್ತದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಎರಡು ರಾತ್ರಿ ಕಳೆದ ಬೇಗ್: ಇಂದು ಜಾಮೀನು ಅರ್ಜಿ ವಿಚಾರಣೆ