ಆನೇಕಲ್: ವಿದ್ಯಾರ್ಥಿಗಳಲ್ಲಿ ಆವಿಷ್ಕಾರ, ವಿನ್ಯಾಸ ಮತ್ತು ಇಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರೇರೇಪಿಸಲು ತರಬೇತಿ ನೀಡುವ ಸಂಸ್ಥೆ ರೋಬೋಕ್ಯೂಬ್, ಹೆಬ್ಬಗೋಡಿಯ ಎಸ್‌ಎಫ್‌ಎಸ್ ಅಕಾಡೆಮಿಯಲ್ಲಿ ವಿಶಿಷ್ಟ ಸ್ಪರ್ಧೆ ಅಯೋಜಿಸಿತ್ತು.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಂಡು ಮಕ್ಕಳು ಹೊಸತನ್ನು ನಿರ್ಮಿಸುವ ಕುತೂಹಲವನ್ನು ಬೆಳೆಸುವಂತಹ ಇಂತಹ ಸ್ಪರ್ಧೆಗಳು ಹೆಚ್ಚಾಗಬೇಕು ಎಂದು ಸ್ಪರ್ಧೆಗೆ ಚಾಲನೆ ನೀಡಿದ ನಟ ಚೇತನ್ ಅಭಿಪ್ರಾಯಪಟ್ಟರು.
ಎಸ್‌ಎಫ್‌ಎಸ್ ಅಕಾಡೆಮಿ ರೋಬೋಕ್ಯೂಬ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ರೋಬೋಟ್ಗಳನ್ನು ಜೋಡಿಸುವ ಹಾಗೂ ಅವುಗಳಿಗೆ ಪ್ರೋಗ್ರಾಮ್ ಕೋಡ್‌ಗಳನ್ನು ಬರೆಯುವುದರ ಬಗ್ಗೆ ತರಬೇತಿ ನೀಡುತ್ತಿದೆ. ಈ ಬಗೆಗಿನ ಪಠ್ಯಕ್ರಮ ಹಾಗೂ ತರಬೇತಿಯಿಂದ ವಿದ್ಯಾರ್ಥಿಗಳು ಮೆಡಿಕಲ್, ಫೈರ್ ಫೈಟರ್ಸ್ ನಂತಹ ರೋಬೋಟ್ ಮಾಡೆಲ್‌ಗಳನ್ನು ನಿರ್ಮಿಸಿದ್ದರು. ಅಲ್ಲದೆ, ರಕ್ಷಣಾ ಕ್ಷೇತ್ರದಲ್ಲಿ ಅವುಗಳನ್ನು ಉಪಯೋಗಿಸುವ ಬಗ್ಗೆ ಅವರ ಯೋಜನೆಗಳು ಬಹಳ ಸ್ವಾರಸ್ಯಕರವಾಗಿದ್ದವು.