ETV Bharat / state

ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿ ದರೋಡೆ: ಓರ್ವ ಆರೋಪಿ ಸೆರೆ - petrol bunk

ಪೆಟ್ರೋಲ್ ಬಂಕ್​ಗೆ ನುಗ್ಗಿದ ಮೂವರು ದರೋಡೆಕೋರರು ಅಲ್ಲಿದ್ದ ಸಿಬ್ಬಂದಿಗೆ ಲಾಂಗ್​ನಿಂದ ಹಲ್ಲೆ‌ ಮಾಡಿ ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದಾರೆ. ಈ ಪೈಕಿ ಆರೋಪಿಯೊಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

Theft in petrol bunk
ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ
author img

By

Published : Aug 5, 2020, 11:19 PM IST

ಬೆಂಗಳೂರು: ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿ ಮಲಗಿದ್ದ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಲಕ್ಷಾಂತರ ರೂ. ದರೋಡೆ ಮಾಡಿದ್ದ ಮೂವರ ಪೈಕಿ ಆರೋಪಿಯೊಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿಯ ನಿವಾಸಿ ರಿಜ್ವಾನ್ ಬಂಧಿತ ಆರೋಪಿ.

ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ಮುನೀಶ್ ಕುಮಾರ್ ಗಂಭೀರ‌ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ಭಾರತದ ಮೂಲದ‌‌ ಮುನೀಶ್ ಕುಮಾರ್ ಬಾಗಲೂರಿನ ನಿರಂತರ ಲೇಔಟ್ ಹೆಚ್.ಪಿ ಪೆಟ್ರೋಲ್ ಬಂಕ್​ನಲ್ಲಿ‌ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ರಾತ್ರಿ ಬಂಕ್ ಕಚೇರಿಯಲ್ಲೇ ಮಲಗುತ್ತಿದ್ದರು‌. ಬಂಕ್ ಮಾಲೀಕರು ಪ್ರತಿದಿನ ಬಂಕ್​ನಿಂದ ಬಂದ ಹಣವನ್ನು ಆಯಾದಿನದ ರಾತ್ರಿಯೇ ತೆಗೆದುಕೊಂಡು‌ ಹೋಗುತ್ತಿದ್ದರು. ಕೆಲಸ ನಿಮಿತ್ತ ಮಾಲೀಕರು ದಿನದ ಹಣವನ್ನು ತೆಗೆದುಕೊಳ್ಳಲು ಬಂದಿರಲಿಲ್ಲ. ಈ ವಿಷ್ಯ ಅರಿತ ದರೋಡೆಕೋರರು ಜು. 31 ರಂದು ನಸುಗಿನ ವೇಳೆ ಬೈಕ್​ನಲ್ಲಿ‌ ಬಂದ ಮೂವರು ದರೋಡೆಕೋರರು ಬಂಕ್‌ ಕಚೇರಿಯ ಲಾಡ್​ನಿಂದ ಬಾಗಿಲು ಬಡಿದಿದ್ದಾರೆ. ಒಳಗೆ ಮಲಗಿದ್ದ ಮುನೀಶ್, ರಾತ್ರಿ ಹೊತ್ತು ಪೆಟ್ರೋಲ್ ಮಾರುವುದಿಲ್ಲ ಎಂದು ಹೇಳಿದರೂ ಬಾಗಿಲು ತಟ್ಟಿದ್ದಾರೆ.

ಅನಿವಾರ್ಯವಾಗಿ ಸಿಬ್ಬಂದಿ‌ ಮುನೀಶ್ ಬಾಗಿಲು ತೆಗೆದಿದ್ದಾರೆ. ಡೋರ್‌‌ ಓಪನ್ ಆಗುತ್ತಿದ್ದಂತೆ ಒಳ ನುಗ್ಗಿದ ಮೂವರು ಖದೀಮರು ಮಾರಕಾಸ್ತ್ರ ತೋರಿಸಿ ಬೆದರಿಸಿ‌ ಮುನೀಶನ ಎಡಭುಜಕ್ಕೆ ಲಾಂಗ್​ನಿಂದ ಹೊಡೆದಿದ್ದಾರೆ.‌ ಭೀತಿಗೊಳಗಾದ ಮತ್ತೊಬ್ಬ ಸಿಬ್ಬಂದಿ‌ ಫೋನ್ ಮಾಡಲು ‌ಮುಂದಾದಾಗ ಆರೋಪಿಗಳು ಆತನ ಮೊಬೈಲ್ ಕಸಿದು ಹೆದರಿಸಿ ಹಣ ಎಲ್ಲಿದೆ ಎಂದು ಕೇಳಿ ಕಬೋರ್ಡ್​ನಲ್ಲಿ ಹಣಕ್ಕಾಗಿ ಶೋಧ ನಡೆಸಿದ್ದಾರೆ. ಈ ವೇಳೆ ಕಬೋರ್ಡ್​ನಲ್ಲಿದ್ದ 1,73,400 ರೂ. ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಗೆ‌ ದೂರು‌ ನೀಡಿದ ಮೇರೆಗೆ‌ ಪೆಟ್ರೋಲ್ ಬಂಕ್​ನಲ್ಲಿ ಅಳವಡಿಸಿಲಾಗಿದ್ದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲಿಸಿದಾಗ ದರೋಡೆಕೋರರ ಕೃತ್ಯ ಸೆರೆಯಾಗಿದೆ. ವಿಡಿಯೊ ಆಧಾರದ ಮೇಲೆ ತನಿಖೆ‌ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.