ಬೆಂಗಳೂರು: ನೀರು ತುಂಬಲು ಹೊರಗಡೆ ಬಂದಿದ್ದವರಿಗೆ ಡ್ರ್ಯಾಗರ್ ತೋರಿಸಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೈಯದ್ ಅರ್ಬಾಸ್, ದಾದಾ ಪೀರ್, ಜಬ್ಬಿ ಪಾಷಾ ಬಂಧಿತ ಆರೋಪಿಗಳು. ಇವರು ತಡರಾತ್ರಿ ನೀರು ತುಂಬಲು ಆಚೆ ಬಂದಿದ್ದವರಿಗೆ ಡ್ರ್ಯಾಗನ್ ತೋರಿಸಿ ಅವರ ಬಳಿಯಿದ್ದ ಮೊಬೈಲ್, ಪರ್ಸ್ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ: ಸಿಡಿ ಪ್ರಕರಣ: ಯುವತಿ ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ ಎಸ್ಐಟಿ
ಇನ್ನು ಆರೋಪಿಗಳ ವಿಚಾರಣೆ ವೇಳೆ ಬೈಕ್ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾಲಕ್ಷ್ಮಿ, ಬ್ಯಾಡರಹಳ್ಳಿ, ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ 4 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 16 ಮೊಬೈಲ್ಗಳು, 650 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.