ಬೆಂಗಳೂರು: ಬಿಜೆಪಿಯ ವಿರುದ್ಧ ಶಿವಾಜಿನಗರದ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗುಡುಗಿದ್ದಾರೆ.
ಮತದಾನ ಮಾಡಲು ಆಗಮಿಸಿ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಿಜ್ವಾನ್ ಬಿಜೆಪಿ ವಿರುದ್ದ ಗುಡುಗಿದ್ರು. ಜನ ಇವತ್ತು ನಮ್ಮ ಪರವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ವೋಟಿಂಗ್ ಮಾಡಬೇಕು. ಇದೊಂದು ಪ್ರಜಾಪ್ರಭುತ್ವದ ಹಬ್ಬ ನಿಮ್ಮ ಕ್ಷೇತ್ರದ ಅಭ್ಯರ್ಥಿಯನ್ನ ನೀವು ಆರಿಸಿಕೊಳ್ಳಿ. ಮನೆಯಿಂದ ಹೊರಬಂದು ಎಲ್ಲರೂ ಮತದಾನ ಮಾಡಿ ವಸಂತ್ ಕುಮಾರ್ ಮತ್ತೆ ಕಾಂಗ್ರೆಸ್ಗೆ ವಾಪಸಾಗಿದ್ದಾರೆ . ಅವರನ್ನು ಬಲವಂತದಿಂದ ಕರೆದುಕೊಂಡು ಹೋಗಲಾಗಿತ್ತು ಎಂದು ರಿಜ್ವಾನ್ ಅರ್ಷದ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಿಜ್ವಾನ್ ಅರ್ಷದ್ ದಿ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಮತದಾನ ಮಾಡಿದ್ದು, ವಾರ್ಡ್ - 62 ಜಯಮಹಲ್ ವಾರ್ಡ್ನ ಬೂತ್ ನಂ- 35 ರಲ್ಲಿ ಪತ್ನಿ ನಜೀಯಾ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.