ETV Bharat / state

ಸೆಂಟ್ರಲ್ ಜೈಲಿನಲ್ಲಿ ರೌಡಿಗಳ ನಡುವೆ ಮಾರಾಮಾರಿ - ಪರಪ್ಪನ ಅಗ್ರಹಾರ

ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

parappana agrahara
ಪರಪ್ಪನ ಅಗ್ರಹಾರ
author img

By

Published : Feb 24, 2021, 6:09 PM IST

ಬೆಂಗಳೂರು: ವಿವಿಧ ಅಪರಾಧಗಳಲ್ಲಿ ಭಾಗಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿಶೀಟರ್​ಗಳ ನಡುವೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.

ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸಲೀಂ ಸಹೋದರನನ್ನು ಇಂದು ನ್ಯಾಯಾಲಯಕ್ಕೆ ಕರೆದೊಯ್ಯಲು ಜೈಲು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ‌ ಪಕ್ಕದ ಬ್ಯಾರಕ್ ನಲ್ಲಿದ್ದ ರೋಹಿತ್ ಗೌಡ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಸಿಬ್ಬಂದಿ ಜೊತೆಯಲ್ಲೇ ರೌಡಿಗಳು ತಳ್ಳಾಡಿ ಬಡಿದಾಡಿಕೊಂಡಿದ್ದಾರೆ.

ಕೊಲೆ ಕೇಸ್ ಆರೋಪದಡಿ ಬಾಂಬೆ ಸಲೀಂ ಹಾಗೂ ಸಹೋದರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್ ಬಾಂಬೆ ಸಲೀಂ ತಮ್ಮನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಬಾಂಬೆ ಸಲೀಂ‌ ಯಾರು ?

ಕೊಲೆ, ಕೊಲೆ ಯತ್ನ, ದರೋಡೆ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್​ನಲ್ಲಿ ಸಲೀಂನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

ಸಲೀಂ ವಿರುದ್ದ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ಇದ್ದುಕೊಂಡೇ ಮನೆಗಳ್ಳತನ ಮಾಡಿಸುವುದು, ಮನೆಗಳ್ಳರ ಗ್ಯಾಂಗ್‌ ಕಟ್ಟುವುದರಲ್ಲಿ ಪಳಗಿರುವ ಈತನ ವಿರುದ್ಧ ಹೈದರಾಬಾದ್‌, ಮುಂಬಯಿ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.