ETV Bharat / state

ರಸ್ತೆಗುಂಡಿ ಮುಚ್ಚಲು ಸೆಪ್ಟೆಂಬರ್​ವರೆಗೆ ಗಡುವು, ಗಣೇಶೋತ್ಸವಕ್ಕೆ 5 ದಿನ ಮೀರುವಂತಿಲ್ಲ​: ಆರ್. ಅಶೋಕ್

ಇಂದು ಕಂದಾಯ ಸಚಿವ ಆರ್. ಅಶೋಕ್ ಅವರು ರಸ್ತೆಗುಂಡಿ ಸಮಸ್ಯೆ, ಗಣೇಶೋತ್ಸವ ಆಚರಣೆ ಹಾಗೂ ಕೋವಿಡ್ ವಿಚಾರವಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಗಡುವು ನೀಡಿದ್ರು.

R Ashok meeting
ಆರ್ ಅಶೋಕ್ ಸಭೆ
author img

By

Published : Sep 6, 2021, 4:58 PM IST

ಬೆಂಗಳೂರು: ಕಂದಾಯ ಸಚಿವ ಆರ್​​. ಅಶೋಕ್​ ಅವರು ಇಂದು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ನಗರದ ರಸ್ತೆಗುಂಡಿ ಸಮಸ್ಯೆ, ಗಣೇಶೋತ್ಸವ ಆಚರಣೆ ಹಾಗೂ ಕೋವಿಡ್ ವಿಚಾರವಾಗಿ ಚರ್ಚಿಸಿದರು.

ಪಾಲಿಕೆ ಅಧಿಕಾರಿಗಳ ಜೊತೆ ಆರ್​​​ ಅಶೋಕ್​ ಸಭೆ

ಸಭೆ ಬಳಿಕ ಮಾತನಾಡಿದ ಅವರು, ನಗರದ ಮುಖ್ಯರಸ್ತೆಗಳನ್ನು ಮುಚ್ಚಲು ಸೆ.20 ಹಾಗೂ ವಾರ್ಡ್ ರಸ್ತೆಗಳ ಗುಂಡಿಗಳನ್ನೂ ಮುಚ್ಚಲು ಸೆಪ್ಟೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಮಳೆಯಿಂದ ರಸ್ತೆಗಳು ಹಾಳಾಗಿವೆ. ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಯನ್ನು ತ್ವರಿತವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. 1,332 ಕಿ.ಮೀ ಮೇಜರ್ ರಸ್ತೆಯಲ್ಲಿ ಗುಂಡಿಗಳಿವೆ. ವಾರ್ಡ್​​ವಾರು 8,5791 ಕಿ.ಮೀ ರಸ್ತೆ ಇದೆ. 2,650 ಕಿ.ಮೀ ರಸ್ತೆಗಳು ಈಗಾಗಲೇ ಗುಂಡಿಗಳಿಂದ ಹಾಳಾಗಿವೆ. 887 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರಸ್ತೆ ಗುಂಡಿಗಳಿವೆ. ಪಾಲಿಕೆ ಬಳಿಯೇ ಡಾಂಬರೀಕರಣ ವ್ಯವಸ್ಥೆ ಇದ್ದು, ಪ್ರತಿದಿನ 20 ಲೋಡ್ ಕಾಂಕ್ರಿಟ್ ಪೂರೈಕೆ ಆಗುತ್ತಿದೆ. ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಗುಂಡಿ ಮುಚ್ಚಿಸಬೇಕು ಎಂದು ತಾಕೀತು ಮಾಡಿದರು.

ಈ ಬಾರಿ ಹೊಸದಾಗಿ ಜಿಯೋ ಸ್ಟಾಂಪ್​​​ ಆ್ಯಪ್​​ ಆರಂಭಿಸಲಾಗಿದೆ. ಈ ಆ್ಯಪ್​​​ ಮೂಲಕ ರಸ್ತೆ ಗುಂಡಿ ಮುಚ್ಚುವ ಮಾಹಿತಿ ಸಾರ್ವಜನಿಕರಿಗೆ ತಕ್ಷಣವೇ ಸಿಗಲಿದೆ. ಗುಣಮಟ್ಟದ ಡಾಂಬರ್ ಹಾಕುವಂತೆ ಸೂಚನೆ ನೀಡಿದ್ದೇನೆ. ಡೆಡ್​​​​ಲೈನ್ ಮೀರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಯಮಗಳ ಪಾಲನೆ ಕಡ್ಡಾಯ:

ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಗೆ ಪ್ರತ್ಯೇಕ ನಿಯಮ ಇದ್ದು, ಬೆಂಗಳೂರಿನಲ್ಲಿ ಕೆರೆಗಳಲ್ಲಿ ಪ್ರತ್ಯೇಕ ಪಾಂಡ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕವಾಗಿ ಇಟ್ಟ ಗಣಪತಿಗೆ ಮಾತ್ರ ನಿಮಜ್ಜನೆಗೆ ಅವಕಾಶ ಇರಲಿದೆ. ನಾಲ್ಕು ಅಡಿ ಎತ್ತರದ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಇದ್ದು, ರಾತ್ರಿ 9 ರವರೆಗೆ ಮಾತ್ರ ನಿಮಜ್ಜನಕ್ಕೆ ಅವಕಾಶ, ನಂತರ ಎಂದಿನಂತೆ ಕರ್ಫ್ಯೂ ಇರಲಿದೆ. ಈಜುಗಾರರಿಗೆ ಮಾತ್ರ ನಿಮಜ್ಜನಕ್ಕೆ ಅವಕಾಶವಿದೆ. ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಮಾನಿಟರಿಂಗ್​ ನಡೆಯಲಿದೆ. ಮೆರವಣಿಗೆಗೆ ಯಾವುದೇ ಅವಕಾಶ ಇರೋದಿಲ್ಲ. 20 ಜನರಿಗೆ ಮಾತ್ರ ನಿಮಜ್ಜನ ಪೂಜೆಗೆ ಅವಕಾಶ ಇರಲಿದೆ. ಸಾರ್ವಜನಿಕರಿಗೆ ಇಡುವ ಗಣಪತಿ ಬಳಿ ಲಸಿಕೆ ಅಭಿಯಾನ ನಡೆಯಲಿದೆ. ಕೋವಿಡ್ ನಿಯಮ ಪಾಲನೆ ಮಾಡೋದು ಕಡ್ಡಾಯ ಎಂದರು.

ಮೊಬೈಲ್ ಟ್ಯಾಂಕ್ :

ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ನಿಮಜ್ಜನೆಗೆ ಮೊಬೈಲ್ ಟ್ಯಾಂಕ್ ನಿಯೋಜಿಸಿದ್ದು, ಮೊಬೈಲ್ ಟ್ಯಾಂಕ್ ಮನೆಗಳ ಬಳಿ ಹೋಗಿ ಮೈಕ್ ಮೂಲಕ ಕರೆ ನೀಡಲಿದ್ದಾರೆ. ವಾರ್ಡ್​​​ನಲ್ಲಿ ಒಂದೇ ಗಣಪತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ಇದ್ದು, ಒಂದಕ್ಕಿಂತ ಹೆಚ್ಚು ಪ್ರತಿಷ್ಠಾಪನೆಗೆ ಮನವಿ ಬಂದರೆ ಸ್ಥಳೀಯ ಪೊಲೀಸ್ ಇನ್​ಸ್ಪೆಕ್ಟರ್ ತೀರ್ಮಾನ ಮಾಡ್ತಾರೆ. ಐದು ದಿನಗಳ ಬಳಿಕ ನಗರದಲ್ಲಿ ಗಣಪತಿ ಮೂರ್ತಿ ನಿಮಜ್ಜನಕ್ಕೆ ಅವಕಾಶವಿಲ್ಲ ಎಂದು ಸಚಿವರು ವಿವರಿಸಿದರು.

ನಗರದ ಮನೆಗಳ ಹೆಲ್ತ್​​ ಸರ್ವೇ:

ಮನೆ ಮನೆಗೆ ಕಾರ್ಪೊರೇಷನ್ ವೈದ್ಯರ ನಡಿಗೆ ಕಾರ್ಯಕ್ರಮ ಶೇ.90ರಷ್ಟು ತನ್ನ ಉದ್ದೇಶ ಪೂರೈಸುತ್ತಿದೆ. ಒಟ್ಟು 2,48,280 ಮನೆಗಳಿಗೆ ವೈದ್ಯರು ತೆರಳಿದ್ದಾರೆ. ಇದುವರೆಗೂ 7,11,648 ಜನರ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪೈಕಿ 22,313 ಜನರಿಗೆ ಕೋವಿಡ್ ಬಂದಿತ್ತು.‌ 4,39,777 ಜನರಿಗೆ ಮೊದಲ ಡೋಸ್ ಲಸಿಕೆಯಾಗಿದೆ. 1,67,081ಜನರಿಗೆ ಎರಡು ಡೋಸ್ ಆಗಿದೆ. ಶೇ. 90 ರಷ್ಟು ವೈದ್ಯರ ನಡಿಗೆ ಮನೆ ಮನೆ ಕಡೆಗೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಅನಾರೋಗ್ಯದಲ್ಲಿರುವವರ ಮಾಹಿತಿ ಸಂಗ್ರಹ:

57,528 ಮಂದಿಗೆ ಆರೋಗ್ಯ ಸಮಸ್ಯೆ ಇರೋದು ಪತ್ತೆಯಾಗಿದೆ. ಡಯಾಬಿಟಿಸ್ 50.86 % ಹೈಪರ್ ಟೆನ್ಷನ್ 32.82 % ಹೃದಯ ಸಂಬಂಧಿ ಇರುವವರು 2.48 % ಥೈರಾಯ್ಡ್ ಸಮಸ್ಯೆ ಇರುವವರು 2.99 ರಷ್ಟಿದ್ದಾರೆ ಎಂದರು.

ಓದಿ: ಹು-ಧಾ ಪಾಲಿಕೆ ಚುನಾವಣೆ ಫಲಿತಾಂಶ : ಪತಿ ಗೆದ್ದು ಬೀಗಿದರೆ.. ಪತ್ನಿಗೆ ಸೋಲಿನ ಕಹಿ ಅನುಭವ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.