ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರಿಗೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ಸ್ಪೀಕರ್ ಕಾಗೇರಿ ಸೂಚನೆ ನೀಡಿದ್ದಾರೆ.
ಪತ್ರಕರ್ತರಿಗೆ ಎಂದಿನಂತೆ ವಿಧಾನಸಭೆ ಮೊಗಸಾಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಮಾರ್ಷಲ್ಗಳಿಗೆ ಸೂಚಿಸಿದ್ದಾರೆ. ಶಾಸಕರ ಪಿಎಗಳಿಗೆ ಮಾತ್ರ ಮೊಗಸಾಲೆ ಪ್ರವೇಶ ನಿರ್ಬಂಧವಿದ್ದು, ಪರ್ತಕರ್ತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.
ಓದಿ : ವಿಧಾನಸಭೆ ಮೊಗಸಾಲೆಯಲ್ಲೂ ಪತ್ರಕರ್ತರಿಗೆ ನಿಷೇಧ!
ಇಂದು ಬೆಳಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮೊಗಸಾಲೆಗಳಿಗೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಾಲಾಗಿತ್ತು. ಈ ಸಂಬಂಧ ಪತ್ರಕರ್ತರಿಗೆ ಸ್ಪೀಕರ್ ಕಾಗೇರಿ ನಿರ್ಬಂಧ ಹೇರಿ ಮೌಖಿಕ ಆದೇಶ ಹೊರಡಿಸಿದ್ದರು. ಉಭಯ ಮೊಗಸಾಲೆಗಳಲ್ಲಿ ಪತ್ರಕರ್ತರನ್ನು ಹೊರಗೆ ಕಳುಹಿಸಲು ಮಾರ್ಷಲ್ಗಳಿಗೆ ಸೂಚಿಸಲಾಗಿತ್ತು. ವಿಧಾನಸಭೆ ಮೊಗಸಾಲೆಯಲ್ಲಿ ಇರುವ ಕ್ಯಾಂಟೀನ್ಗೆ ಮಾತ್ರ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈ ಸಂಬಂಧ ಪತ್ರಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಇದೀಗ ನಿರ್ಬಂಧವನ್ನು ತೆರವು ಮಾಡಲಾಗಿದೆ.