ETV Bharat / state

ವೈಯಕ್ತಿಕ ಖಾತೆಗಳ ನಿರ್ಬಂಧ: ಹೈಕೋರ್ಟ್​ನಲ್ಲಿ 25 ಲಕ್ಷ ರೂ. ಠೇವಣಿ ಇಟ್ಟ ಎಕ್ಸ್ ಕಾರ್ಪ್

ಕೆಲ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಎಕ್ಸ್​ ಕಾರ್ಪ್​ ಹೈಕೋರ್ಟ್​ನಲ್ಲಿ 25 ಲಕ್ಷ ರೂ ಠೇವಣಿ ಇಟ್ಟಿದೆ.

author img

By ETV Bharat Karnataka Team

Published : Sep 13, 2023, 8:39 PM IST

restriction-of-personal-accounts-dot-x-corp-deposited-25-lakhs-in-the-high-court
ವೈಯಕ್ತಿಕ ಖಾತೆಗಳ ನಿರ್ಬಂಧ : ಹೈಕೋರ್ಟ್​ನಲ್ಲಿ 25 ಲಕ್ಷ ಠೇವಣಿ ಇಟ್ಟ ಎಕ್ಸ್ ಕಾರ್ಪ್

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ‘ಎ’ ಅಡಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಕೆಲವು ಖಾತೆಗಳಿಗೆ ನಿರ್ಬಂಧ ವಿಧಿಸಲು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಎಕ್ಸ್ ಕಾರ್ಪ್(ಹಿಂದಿನ ಟ್ವಿಟರ್) ಬುಧವಾರ ಹೈಕೋರ್ಟ್‌ನಲ್ಲಿ 25 ಲಕ್ಷ ರೂ. ಠೇವಣಿ ಇಟ್ಟಿದೆ.

ಎಕ್ಸ್ ಕಾರ್ಪ್ ಸಂಸ್ಥೆಗೆ ದಂಡ ವಿಧಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜೆ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ, ಏಕ ಸದಸ್ಯಪೀಠ ವಿಧಿಸಿರುವ 50 ಲಕ್ಷ ದಂಡದ ಪೈಕಿ ಶೇ.50ರಷ್ಟು ಹಣ ಅಂದರೆ 25 ಲಕ್ಷ ರೂ.ಗಳನ್ನು ಠೇವಣಿ ಮಾಡುವಂತೆ ಷರತ್ತು ವಿಧಿಸಿತ್ತು. ಈ ಷರತ್ತಿನಂತೆ ಇದೀಗ ಎಕ್ಸ್‌ ಕಾರ್ಪ್ ಕಂಪನಿ ಶೇ.50ರಷ್ಟು ಹಣವನ್ನು ಪಾವತಿ ಮಾಡಿದೆ. ಈ ವಿಷಯವನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠದ ಮುಂದೆ ಎಕ್ಸ್‌ ಕಾರ್ಪ್‌ ಪರ ವಕೀಲರು ವಾದ ಮಂಡಿಸಿದರು.

ಕಳೆದ ಆಗಸ್ಟ್‌ 10ರಂದು ವಿಭಾಗೀಯ ಪೀಠ ಒಂದು ವಾರದಲ್ಲಿ ಶೇ.50ರಷ್ಟು ಹಣ ಠೇವಣಿ ಮಾಡಬೇಕು ಎಂದು ಷರತ್ತಿನೊಂದಿಗೆ ಏಕ ಸದಸ್ಯ ಪೀಠದ ಆದೇಶಕ್ಕೆೆ ಮಧ್ಯಂತರ ತಡೆ ನೀಡಿತ್ತು. ಅಲ್ಲದೇ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಜಾರಿ ಮಾಡಲಾಗಿದೆಯೇ ಎಂಬುದರ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ಪೀಠ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿತ್ತು. ಜತೆಗೆ, 50 ಲಕ್ಷ ರೂ.ಗಳ ದಂಡ ವಿಧಿಸುವಂತೆ ಏಕಸದಸ್ಯಪೀಠ ನೀಡಿದ್ದ ಆದೇಶಕ್ಕೆೆ ನೀಡಿರುವ ತಡೆಯಾಜ್ಞೆ ವಿಸ್ತರಿಸಿ ವಿಚಾರಣೆಯನ್ನು ಸೆ.15ಕ್ಕೆೆ ಮುಂದೂಡಿತ್ತು.

ಕೇಂದ್ರ ಸರ್ಕಾರ ಸೆಕ್ಷನ್ 69ಎಗೆ ವಿರುದ್ಧವಾಗಿ ಕೆಲವರ ವೈಯಕ್ತಿಕ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ಇದು ನಿಯಮ ಬಾಹಿರ ಕ್ರಮ. ಹಾಗಾಗಿ ಕೇಂದ್ರದ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕಂಪನಿ ಮೇಲ್ಮನವಿಯಲ್ಲಿ ನ್ಯಾಯಾಲಯವನ್ನು ಕೋರಿದೆ.

ಪ್ರಕರಣದ ಹಿನ್ನೆಲೆ: ಕೆಲ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಎಕ್ಸ್ ಕಾರ್ಪ್(ಟ್ವಿಟರ್) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿ 50 ಲಕ್ಷ ರೂ.ಗಳ ದಂಡವನ್ನು ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ಕುರಿತು ಈ ಹಿಂದೆ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, 50 ಲಕ್ಷ ರೂ.ಗಳ ದಂಡದ ಆದೇಶಕ್ಕೆ ತಡೆ ನೀಡಿತ್ತು. ಎಕ್ಸ್ ಕಾರ್ಪ್ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದಂಡದ ಒಟ್ಟು ಮೊತ್ತದಲ್ಲಿ ಶೇ. 50ರಷ್ಟು(25 ಲಕ್ಷ ರೂ.) ಮುಂದಿನ ಒಂದು ವಾರದಲ್ಲಿ (ಠೇವಣಿ) ಪಾವತಿಸಲು ನಿರ್ದೇಶನ ನೀಡಿತ್ತು. ಜತೆಗೆ, ಈ ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಕ್ಷೇಪಣೆಗಳನ್ನು ಮುಂದಿನ ದಿನಾಂಕದ ವೇಳೆಗೆ ಸಲ್ಲಿಸಬೇಕು ಎಂದು ಪೀಠ ತಿಳಿಸಿತ್ತು.

ಇದನ್ನೂ ಓದಿ : ಕೆಲ ವೈಯಕ್ತಿಕ ಖಾತೆಗಳ ನಿರ್ಬಂಧ.. ಆದೇಶ ಪಾಲನೆ ಕುರಿತು ವಿವರಣೆ ಸಲ್ಲಿಸಲು ಎಕ್ಸ್ ಕಾರ್ಪ್‌ಗೆ ಹೈಕೋರ್ಟ್​ನಿಂದ ಕೊನೆಯ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.