ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿ ಇದ್ದ ಕಾರಣ ರೈಲ್ವೆ ಟಿಕೆಟ್ ಕಾದಿರಿಸುವಿಕೆ ಕೇಂದ್ರಗಳನ್ನು ಜೂನ್ 20ರವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಅನ್ ಲಾಕ್ ಆಗಿರುವ ಕಾರಣ ಇಂದಿನಿಂದ ಬನಶಂಕರಿ, ಜಯನಗರ, ಕೋರಮಂಗಲ, ಕೆ ಆರ್ ಮಾರುಕಟ್ಟೆ, ಹೈಕೋರ್ಟ್, ವಿಧಾನಸೌಧ ಮತ್ತು ಎಲೆಕ್ಟ್ರಾನಿಕ್ ಸಿಟಿಗಳಲ್ಲಿರುವ ರೈಲ್ವೆ ನಿಲ್ದಾಣದಿಂದ ದೂರಸ್ಥಿತ ಪ್ರಯಾಣಿಕರ ಕಾದಿರಿಸುವಿಕೆ ಕೇಂದ್ರಗಳು ಮತ್ತೆ ಆರಂಭವಾಗಿವೆ.
ಬನಶಂಕರಿ, ಜಯನಗರ, ಕೋರಮಂಗಲ, ಕೆ ಆರ್ ಮಾರುಕಟ್ಟೆ ಮತ್ತು ಎಲೆಕ್ಟ್ರಾನಿಕ್ ಸಿಟಿಗಳಲ್ಲಿರುವ ಕಾದಿರಿಸುವಿಕೆ ಕೇಂದ್ರಗಳು ಬೆಳಗ್ಗೆ 08.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆವರೆಗೆ ತೆರೆದಿರಲಿದೆ. ವಿಧಾನ ಸೌಧದ ಕಾದಿರಿಸುವಿಕೆ ಕೇಂದ್ರವು ಬೆಳಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆವರೆಗೆ ಮತ್ತು ಹೈಕೋರ್ಟ್ ಬಳಿ ಇರುವ ಕಾದಿರಿಸುವಿಕೆ ಕೇಂದ್ರವು ಬೆಳಗ್ಗೆ 09.30 ಗಂಟೆಯಿಂದ 04.00 ಗಂಟೆವರೆಗೆ ತೆರೆದಿರುತ್ತದೆ. ಇನ್ನು ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಕಾರಣ ಈ ಕೇಂದ್ರಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ.
ಓದಿ: ನಮ್ಮಲ್ಲಿ ಗುಂಪುಗಾರಿಕೆ ಇಲ್ಲ, ಇರೋದು ಕಾಂಗ್ರೆಸ್ ಗುಂಪು ಅಷ್ಟೇ: ಡಿಕೆ ಶಿವಕುಮಾರ್