ETV Bharat / state

Free Bus: ಉಚಿತ ಬಸ್ ಪ್ರಯಾಣ- ಮಹಿಳಾ ಪ್ರಯಾಣಿಕರು ಏನಂತಾರೆ?

ಇಂದಿನಿಂದ ಜಾರಿಯಾಗುತ್ತಿರುವ 'ಶಕ್ತಿ ಯೋಜನೆ' ಕುರಿತು ರಾಜ್ಯ ಮಹಿಳೆಯರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಉಚಿತ ಬಸ್ ಪ್ರಯಾಣಕ್ಕೆ ಮಹಿಳಾ ಅಭಿಪ್ರಾಯ
ಉಚಿತ ಬಸ್ ಪ್ರಯಾಣಕ್ಕೆ ಮಹಿಳಾ ಅಭಿಪ್ರಾಯ
author img

By

Published : Jun 11, 2023, 12:40 PM IST

Updated : Jun 11, 2023, 1:05 PM IST

ಉಚಿತ ಬಸ್ ಪ್ರಯಾಣದ ಕುರಿತು ಮಹಿಳೆಯರ ಅಭಿಪ್ರಾಯ

ಬೆಂಗಳೂರು: ಇಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ 'ಶಕ್ತಿ ಯೋಜನೆ'ಗೆ ರಾಜ್ಯದ ನಾರಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮೊದಲ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಎಲ್ಲ ರಸ್ತೆ ಸಾರಿಗೆ ನಿಗಮಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.

ಈಟಿವಿ ಭಾರತದ ಜೊತೆ ಮಾತನಾಡಿದ ಮಹಿಳಾ ಪ್ರಯಾಣಿಕರಾದ ಪವಿತ್ರ, "ಯೋಜನೆ ಬಡವರಿಗೆ ತುಂಬಾ ಅನುಕೂಲವಾಗಿದೆ. ಕೂಲಿಕಾರರು ದಿನವಿಡೀ ದುಡಿದು ಅಲ್ಪ ಹಣ ಸಂಪಾದನೆ ಮಾಡುತ್ತಾರೆ. ದಿನ ಬೆಳಗಾದರೆ ಬಸ್ ಪ್ರಯಾಣಕ್ಕೆ ಹಣ ಖರ್ಚು ಮಾಡಬೇಕು. ಅದೇ ನೂರು ರೂಪಾಯಿ ಹಣ ಉಳಿದರೆ ಮಕ್ಕಳನ್ನು ಸಾಕಲು, ಸಂಸಾರ ಸಾಗಿಸಲು ಅನುಕೂಲವಾಗಲಿದೆ" ಎಂದರು.

"ಬಡವರು ಸರ್ಕಾರದ ಶಕ್ತಿ ಯೋಜನೆಯನ್ನು ಬಳಸಿಕೊಳ್ಳಬೇಕು. ಬಸ್​ನಲ್ಲಿ ಸಂಚರಿಸುವವರೆಲ್ಲ ಬಡ ಮಧ್ಯಮ ವರ್ಗದವರು, ಕಾರ್ಮಿಕರು. ಉಳ್ಳವರು ಆಟೋ, ಟ್ಯಾಕ್ಸಿಗಳಲ್ಲಿ ಓಡಾಡುತ್ತಾರೆ. ಹಾಗಾಗಿ ನಮ್ಮಂತಹ ಕಾರ್ಮಿಕರು, ಬಡವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ರಜೆಗಳಲ್ಲಿ ಮಾತ್ರ ನಮ್ಮ ಊರಿಗೆ ಹೋಗುತ್ತೇವೆ. ಎಲ್ಲ ಬಡ ಕುಟುಂಬ ಇಲ್ಲೇ ಕೂಲಿ ಮಾಡಿ ಇಲ್ಲೇ ಬದುಕುತ್ತಾರೆ, ಹಾಗಾಗಿ ಅವರೆಲ್ಲ ಕೂಲಿಗೆ ಹೋಗುವಾಗಲೂ ಉಚಿತವಾಗಿ ಹೋಗಬಹುದು. ಊರಿಗೆ ಹೋಗುವಾಗಲೂ ಉಚಿತವಾಗಿ ಹೋಗಬಹುದಾಗಿದೆ. ಹಾಗಾಗಿ ಈ ಶಕ್ತಿ ಯೋಜನೆ ನಮಗೆ ಖುಷಿ ತಂದಿದೆ, ಮುಂದೆ ಏನಾಗುತ್ತದೋ ನೋಡೋಣ" ಎಂದು ಹೇಳಿದರು.

ಮತ್ತೋರ್ವ ಮಹಿಳಾ ಪ್ರಯಾಣಿಕರಾದ ಜ್ಯೋತಿ ಮಾತನಾಡಿ, "ಶಕ್ತಿ ಯೋಜನೆ ಉತ್ತಮವಾಗಿದೆ. ಎಲ್ಲರಿಗೂ ಉಚಿತ ಎಂದರೆ ಒಳ್ಳೆಯದೇ. ಈ ಯೋಜನೆಯಿಂದ ವಿದ್ಯಾರ್ಥಿನಿಯರಾದ ನಾವು ಪಾಸ್​ಗಾಗಿ ಸರದಿಯಾಗಿ ನಿಂತು ಕಾಯಬೇಕಿಲ್ಲ. ನಮ್ಮ ಶಾಲೆ, ಮನೆ ಮಾರ್ಗದ ಹೊರತುಪಡಿಸಿಯೂ ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಪ್ರಯಾಣಿಸಬಹುದು, ಈ ಯೋಜನೆ ಉಪಯುಕ್ತವಾಗಿದೆ. ಎಲ್ಲ ರೀತಿಯಲ್ಲೂ ಯೋಜನೆ ಅನುಕೂಲಕರವಾಗಿದೆ" ಎಂದು ತಿಳಿಸಿದರು.

ಫ್ರೀ ಬಸ್ ಓಕೆ, ಕರೆಂಟ್ 'ಶಾಕ್' ಯಾಕೆ?: ಉಚಿತ ಬಸ್ ಪ್ರಯಾಣಕ್ಕೆ ಖುಷಿ ವ್ಯಕ್ತಪಡಿಸುತ್ತಲೇ ಪ್ರಯಾಣಿಕರು ವಿದ್ಯುತ್ ದರ ಏರಿಕೆಯ ಪ್ರಸ್ತಾಪ ಮಾಡಿದರು. ಉಚಿತ ವಿದ್ಯುತ್ ಎನ್ನುವ ಇವರು ದಿಢೀರ್ ವಿದ್ಯುತ್ ದರ ಹೆಚ್ಚಿಸಿದ್ದಾರೆ. ನಮ್ಮ ಮನೆಗಳ ವಿದ್ಯುತ್ ಬಿಲ್ ತುಂಬಾ ಏರಿಕೆಯಾಗಿದೆ. ಸರ್ಕಾರ ಇತ್ತ ಗಮನ ಹರಿಸಬೇಕು ಎನ್ನುವ ಮನವಿಯನ್ನೂ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿದ ಮಹಿಳಾ ಪ್ರಯಾಣಿಕರಾದ ಉಮಾ, "ನಮಗೆ ಶಕ್ತಿ ಯೋಜನೆ ತಂದಿದ್ದು ಸಂತೋಷವಾಗಿದೆ. ಕೆಲಸಕ್ಕೆ ಹೋಗುವ ನಮ್ಮಂತವರಿಗೆ ತುಂಬಾ ಅನುಕೂಲಕರವಾಗಿದೆ. ಬೆಳಗ್ಗೆದ್ದು ಕೂಲಿಗೆ ಹೋಗುವವರಿಗೆ ಅನುಕೂಲವಾಗಲಿದೆ. ದಿನ ಬಸ್ ಟಿಕೆಟ್​ಗಾಗಿಯೇ ನೂರು ರೂಪಾಯಿ ಬೇಕಿತ್ತು. ಈಗ ಅದು ಉಚಿತವಾಗಲಿದೆ."

"ಶನಿವಾರ, ಭಾನುವಾರ ಎಲ್ಲಿಯಾದರೂ ಹೋಗಬೇಕು ಎಂದಿದ್ದರೆ ಹಣ ಹೊಂದಿಸಿಕೊಂಡು ಹೋಗಬೇಕಿತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಇದು ಒಳ್ಳೆಯ ಯೋಜನೆ. ಹೀಗೆಯೇ ನಡೆದುಕೊಂಡು ಹೋಗಲಿ. ಇದೇ ವೇಳೆ ವಿದ್ಯುತ್ ದರ ಒಂದು ಕಡಿಮೆ ಮಾಡಿದರೆ ಒಳ್ಳೆಯದು" ಎಂದರು.

ದ್ರಾಕ್ಷಾಯಿಣಿ ಮಾತನಾಡಿ, "ಶಕ್ತಿ ಯೋಜನೆಯಿಂದ ಅಲ್ಲಿ ಇಲ್ಲಿ ಹೋಗಲು ಟಿಕೆಟ್​ಗಾಗಿ ಹಣ ಹೊಂದಿಸಿಕೊಳ್ಳುವುದೇ ಸಮಸ್ಯೆಯಾಗುತ್ತಿತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಹಾಗಾಗಿ ಖುಷಿಯಾಗಿದೆ. ನಾವು ದೂರ ಪ್ರಯಾಣ ಮಾಡುತ್ತೇವೆ. ನಮಗೆ ಅನುಕೂಲವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: LIVE: Free bus travel for women: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭ

Last Updated : Jun 11, 2023, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.