ETV Bharat / state

ಡಿ.7ರಂದು ಸಾಂಕೇತಿಕ ಪ್ರತಿಭಟನೆಗೆ ಮುಂದಾದ ರೆಸಿಡೆಂಟ್ ಡಾಕ್ಟರ್ಸ್

ಕಳೆದ 2 ತಿಂಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸೇವೆ ನೀಡಲು ವೈದ್ಯರಾದ ನಾವು ಸಿದ್ದರಿದ್ದೇವೆ. ಆದರೂ ನಾನ್ ಕೋವಿಡ್ ಸೇವೆ ಪ್ರಾರಂಭಿಸಲು ಹಿಂದೇಟು ಏಕೆ? ಎಂದು ನಿವಾಸಿ ವೈದ್ಯರು ಪ್ರಶ್ನಿಸಿದ್ದಾರೆ..

Resident Doctors protest
ಡಿ.7ರಂದು ಸಾಂಕೇತಿಕ ಪ್ರತಿಭಟನೆಗೆ ಮುಂದಾದ ರೆಸಿಡೆಂಟ್ ಡಾಕ್ಟರ್ಸ್
author img

By

Published : Dec 6, 2020, 2:27 PM IST

ಬೆಂಗಳೂರು : ಸರ್ಕಾರ ಆದಷ್ಟು ಬೇಗ ನಿದ್ದೆಯ ಮಂಪರಿನಿಂದ ಎದ್ದೇಳಬೇಕು ಎಂದು ನಿವಾಸಿ ವೈದ್ಯರು (ರೆಸಿಡೆಂಟ್ ಡಾಕ್ಟರ್ಸ್) ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.7ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ 9 ತಿಂಗಳಿಂದ ನಿವಾಸಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಸಂಬಂಧಿತ ಕಾರ್ಯದಲ್ಲಿ ತೊಡಗಿದ್ದೇವೆ. ಹಾಗೇ ಕರ್ನಾಟಕದಲ್ಲಿ ಕೋವಿಡ್ ಮೆಟ್ಟಿ ನಿಲ್ಲಲು ಕಾಣಿಕೆ ನೀಡಿದ್ದೇವೆ. ಮಾನಸಿಕ ಹಾಗೂ ದೈಹಿಕ ಪರಿಶ್ರಮದಿಂದ ಈ ಯಶಸ್ಸು ದೊರೆಯಲು ಸಾಧ್ಯವಾಯಿತು.

ಎಷ್ಟೇ ಕಷ್ಟವಿದ್ದರೂ ಪಿಪಿಇ ಕಿಟ್ ಧರಿಸಿ ಕಳೆದ 9 ತಿಂಗಳಿನಲ್ಲಿ ನಮ್ಮ ಕೈಲಾದಷ್ಟು ಸೇವೆಯನ್ನು ಜನರಿಗೆ ಸಮರ್ಪಿಸುವ ಮೂಲಕ ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೇವೆ. ಆದರೆ, ಕೆಲವು ಕುಂದು ಕೊರತೆಗಳು ತಮ್ಮನ್ನ ಕಾಡುತ್ತಿರುವುದಾಗಿ ತಿಳಿಸಿದ್ದಾರೆ.

ಡಿ.7ರಂದು ಸಾಂಕೇತಿಕ ಪ್ರತಿಭಟನೆಗೆ ಮುಂದಾದ ರೆಸಿಡೆಂಟ್ ಡಾಕ್ಟರ್ಸ್

ಕರ್ನಾಟಕದ ಅತಿ ದೊಡ್ಡ ಸಾರ್ವಜನಿಕ ಆಸ್ಪತ್ರೆ ವಿಕ್ಟೋರಿಯಾದಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಸೇವೆ ಸಿಗದೆ 9 ತಿಂಗಳು ಕಳೆದಿದೆ. ದಿನಕ್ಕೆ 3 ರಿಂದ 4 ಸಾವಿರ ರೋಗಿಗಳಿಗೆ ಸೇವೆ ನೀಡುತ್ತಿದ್ದ ಈ ಆಸ್ಪತ್ರೆ ಈಗ ಬಿಕೋ ಎನ್ನುತ್ತಿದೆ. ಹಲವಾರು ಬಾರಿ ಅಧಿಕಾರಿಗಳಿಗೆ ಮೌಖಿಕ ಹಾಗೂ ಲೇಖನದಲ್ಲಿ ಮನವಿ ಮಾಡಿದರು ಯಾವುದೇ ಬದಲಾಣೆಯಾಗಿಲ್ಲ.

ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಹೀಗೆ ಬೀಗ ಹಾಕಿದರೆ ಜನ ಸಾಮಾನ್ಯರು ಎಲ್ಲಿಗೆ ಹೋಗಬೇಕು? ಜ್ಞಾನ ದೇಗುಲ ಎಂದು ಭಾವಿಸಿಕೊಂಡು ಇಲ್ಲಿ ಓದುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಕಳೆದ 2 ತಿಂಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸೇವೆ ನೀಡಲು ವೈದ್ಯರಾದ ನಾವು ಸಿದ್ದರಿದ್ದೇವೆ. ಆದರೂ ನಾನ್ ಕೋವಿಡ್ ಸೇವೆ ಪ್ರಾರಂಭಿಸಲು ಹಿಂದೇಟು ಏಕೆ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಎಲ್ಲಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಾನ್ ಕೋವಿಡ್ ಸೇವೆ ನೀಡಲು ಪ್ರಾರಂಭಿಸಬೇಕು. ಇದರಿಂದ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕೂಡ ಡಿ.1ರಿಂದ ನಾನ್ ಕೋವಿಡ್ ಸೇವೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೋಧನಾ ಶುಲ್ಕ ವಿನಾಯಿತಿಗೆ ಆಗ್ರಹ : ಕಳೆದ 9 ತಿಂಗಳಿಂದ ವೈದ್ಯಕೀಯ ವಿದ್ಯಾರ್ಥಿಗಳು, ಗೃಹ ವೈದ್ಯರು, ಸ್ನಾತಕೋತ್ತರ ವಿಧ್ಯಾರ್ಥಿಗಳು ಕೇವಲ ಕೋವಿಡ್ ಸಂಬಂಧಿತ ಕಾರ್ಯದಲ್ಲಿ ತೊಡಗಿದ್ದರು. ಹಾಗೂ ಶೈಕ್ಷಣಿಕ ತರಬೇತಿಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಶೈಕ್ಷಣಿಕ ಸಾಲಿನ ಒಂದು ವರ್ಷದ ಬೋಧನಾ ಶುಲ್ಕ ವಿನಾಯಿತಿ ನೀಡಬೇಕು. ಕಳೆದ 8 ತಿಂಗಳ ಸೇವೆಯನ್ನು, ನಾವು ಪಟ್ಟ ಪರಿಶ್ರಮವನ್ನು ಗುರುತಿಸಿ ಕೋವಿಡ್ ರಿಸ್ಕ್ ಭತ್ಯೆಯನ್ನುನೀಡಬೇಕು.

ಕಡ್ಡಾಯ ಸೇವೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೀನಿಯರ್ ರೆಸಿಡೆಂಟ್ ವೈದ್ಯರಿಗೆ ಸೇವೆಗೆ ಸೇರಿದ ದಿನದಿಂದ ಈವರೆಗೂ ಯಾವುದೇ ರೀತಿಯ ಸಂಬಳವನ್ನು ರಾಜ್ಯದ ಹಲವು ವೈದ್ಯಕೀಯ ಕಾಲೇಜಿನಲ್ಲಿ ನೀಡಿಲ್ಲ. ಬೆಂಗಳೂರಿನ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರಿಗೆ 6 ತಿಂಗಳು ಕಳೆದರೂ ಪರಿಷ್ಕೃತ ಶಿಷ್ಯ ವೇತನ ದೊರಕಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತು ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಕಾಲದಲ್ಲಿ ಗೃಹ ವೈದ್ಯರು ಕೂಡ ನಿರಂತರವಾಗಿ ಕೆಲಸ ಮಾಡಿದ್ದಾರೆ. ನೀಟ್ ಹಾಗೂ ಎಂಬಿಬಿಎಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದ್ದರಿಂದ ತಮ್ಮ ಗೃಹ ವೈದ್ಯ ಅವಧಿಯನ್ನು ಮುಂದೂಡುವ ಭಯ ಗೃಹ ವೈದ್ಯರಿಗೆ ಕಾಡುತ್ತಿದೆ. ಕೋರ್ಸಿನ ಪ್ರಕಾರ 12 ತಿಂಗಳು ಮಾತ್ರ ಅವಕಾಶ ಇರುವುದರಿಂದ ಗೃಹ ವೈದ್ಯರ ಗೊಂದಲ ಶೀಘ್ರದಲ್ಲಿ ಬಗೆಹರಿಸಬೇಕು.

ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳು ಪ್ರಾರಂಭವಾದ್ರೂ ಹಲವಾರು ಕಡೆ ಸೂಕ್ತ ಕ್ಲಿನಿಕಲ್ ತರಬೇತಿ ದೊರೆಯುತ್ತಿಲ್ಲ. ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಸಂಪೂರ್ಣವಾಗಿ ನಾನ್ ಕೋವಿಡ್ ಸೇವೆಗೆ ಮೀಸಲಿಟ್ಟು ಸಾಮಾನ್ಯ ಆಸ್ಪತ್ರೆಗಳು ಕೋವಿಡ್ ಸಂಬಂಧಿ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಡಿ. 7ರಂದು ಎಲ್ಲಾ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.