ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಆಸ್ಪತ್ರೆಯಲ್ಲಿಯೇ ಇದ್ದಾರೆ. ಅವರೆಲ್ಲೂ ಹೋಗಿಲ್ಲ ಎಂದು ನಾಗೇಂದ್ರ ಅವರ ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.
ಶಾಸಕ ನಾಗೇಂದ್ರ ಆಸ್ಪತ್ರೆಯಿಂದ ಮುಂಬೈಗೆ ಹೋಗಿದ್ದಾರೆ ಎನ್ನುವ ವರದಿಗಳು ಬರುತ್ತಿವೆ. ಆದರೆ ಅವರು ಎಲ್ಲಿಯೂ ಹೋಗಿಲ್ಲ. ಹೆಬ್ಬಾಳದ ಆಸ್ಟರ್ ಆಸ್ಪತ್ರೆಯ ಮೂರನೇ ಮಹಡಿಯ 251ನೇ ನಂಬರಿನ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ. ಯಾವ ಊರಿಗೂ ಹೋಗಲ್ಲ, ಹೋಗಲೂ ಆಗದ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಶಾಸಕರು ಮುಂಬೈಗೆ ಹೋಗಿದ್ದಾರೆ ಎನ್ನುವ ವಿಷಯಕ್ಕೆ ಕುಟುಂಬಸ್ಥರು ತೆರೆ ಎಳೆದಿದ್ದಾರೆ.