ETV Bharat / state

ಮಂಗಗಳು, ವನ್ಯಜೀವಿಗಳ ತೊಂದರೆಯೇ? ಟೋಲ್ ಫ್ರೀ ಸಂಖ್ಯೆ 1533 ಕ್ಕೆ ದೂರು ನೀಡಲು ಬಿಬಿಎಂಪಿ ಮನವಿ - ವನ್ಯಜೀವಿಗಳಿಂದಾಗುವ ತೊಂದರೆಗೆ ಬಿಬಿಎಂಪಿಗೆ ದೂರು ನೀಡಲು ಟೋಲ್ ಫ್ರೀ ಸಂಖ್ಯೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಕಂಡುಬಂದ ಸಂದರ್ಭದಲ್ಲಿ ಈವರೆಗೆ ಸಾರ್ವಜನಿಕರು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಪತ್ರದ ಮೂಲ ಅಥವಾ ದೂರವಾಣಿ ಮೂಲಕ ದೂರುಗಳನ್ನು ನೀಡುತ್ತಿದ್ದರು ಎಂದು ತಿಳಿಸಿದೆ.

ಬಿಬಿಎಂಪಿ
ಬಿಬಿಎಂಪಿ
author img

By

Published : Aug 3, 2022, 10:32 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ (ಮಂಗಗಳು, ಹಾವುಗಳು, ಪಕ್ಷಿಗಳು ಹಾಗೂ ಇನ್ನಿತರ) ಆಗಬಹುದಾದ ತೊಂದರೆಗಳನ್ನು ನಿವಾರಣೆ ಮಾಡುವ ಸಂಬಂಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರುಗಳು ಟೋಲ್ ಫ್ರೀ ಸಂಖ್ಯೆ 1533 ಅಥವಾ ನಮ್ಮ ಬೆಂಗಳೂರು ಮೊಬೈಲ್ ಆಪ್ ಮುಖಾಂತರ ದೂರುಗಳನ್ನು ದಾಖಲಿಸಲು ಪಾಲಿಕೆ ಹೇಳಿದೆ.

ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ 5120/2021 ರಂತೆ ವೈಜ್ಞಾನಿಕ ರೀತಿಯಲ್ಲಿ ಪ್ರಾಣಿಹಿಂಸೆ ಆಗದಂತೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಮತ್ತು ಪ್ರಾಣಿಹಿಂಸೆ ತಡೆ ಕಾಯಿದೆ 1960 ಉಲ್ಲಂಘನೆಯಾಗದಂತೆ ಸಾರ್ವಜನಿಕರ ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ಗಾಯಗೊಂಡ, ರೋಗಗ್ರಸ್ಥ ಹಾಗೂ ಸಾರ್ವಜನಿಕರಿಗೆ ಹಾನಿಯುಂಟು ಮಾಡುವಂತಹ ಮಂಗಗಳನ್ನು ರಕ್ಷಣೆ ಮಾಡಿ, ಸೂಕ್ತ ಆವಾಸ ಸ್ಥಳಕ್ಕೆ/ಪುನರ್‌ವಸತಿ ಸ್ಥಳಾಂತರ ಮಾಡುವಂತೆ ಈ ಮೊದಲು ತಿಳಿಸಿತ್ತು ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್​ನವರ ವೀಕ್ನೆಸ್​ ಮೇಲೆ ನಾವು ರಾಜಕೀಯ ಮಾಡುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.