ETV Bharat / state

RBI ರೆಪೋ ದರ ಯಥಾಸ್ಥಿತಿ: ಎಫ್‌ಕೆಸಿಸಿಐ ಸ್ವಾಗತ - ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಲಿದೆ

"ರೆಪೋ ದರ ಯಥಾಸ್ಥಿತಿಯಲ್ಲಿ ಇರುವುದರಿಂದ ಸಾಲದಾತ ಸಂಸ್ಥೆಗಳು ದರ ಹೆಚ್ಚಿಸುವುದಿಲ್ಲ'' ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ಹೇಳಿದರು.

Repo rate status quo, RBI decision welcome: FKCCI Chairman B.V. Gopal Reddy
ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ
author img

By

Published : Aug 10, 2023, 9:35 PM IST

ಬೆಂಗಳೂರು: ''ರೆಪೋ ದರವನ್ನು ಯಥಾಸ್ಥಿತಿಯಲ್ಲಿರಿಸುವ ಆರ್‌ಬಿಐ ನಿರ್ಧಾರವನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ನಿರೀಕ್ಷೆಯಂತೆ ದರವನ್ನು ಶೇ 6.5ಕ್ಕೆ ಬದಲಾಯಿಸದೇ ಉಳಿಸಿಕೊಳ್ಳಲಾಗಿದೆ. ಹೀಗಿದ್ದರೂ ಅಪೆಕ್ಸ್‌ ಬ್ಯಾಂಕ್ ಮುಂಬರುವ ತ್ರೈಮಾಸಿಕಗಳಲ್ಲಿ ಹಣದುಬ್ಬರ ಮುನ್ಸೂಚನೆ ನೀಡಿದೆ'' ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ಹೇಳಿದರು.

''ಮೇ 2022ರಿಂದ ಆರ್‌ಬಿಐ 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ ನಂತರ ಬದಲಾಗದ ರೆಪೋ ದರವು ಎಂಪಿಸಿ ಸಭೆಯ ಸಕಾರಾತ್ಮಕ ಹೆಜ್ಜೆ. ಏಕೆಂದರೆ ಇದು ಸಾಲ ಮಂಜೂರಾತಿಯಲ್ಲಿ ವೇಗ ಕಾಯ್ದುಕೊಳ್ಳುತ್ತದೆ'' ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಲಿದೆ: ''ಸಾಲಗಾರರಿಗೆ ಫ್ಲೋಟಿಂಗ್ ದರದಿಂದ ಸ್ಥಿರ ದರದ ಅನುಮತಿ ನೀಡುವ ಪ್ರಸ್ತಾಪವು ಭವಿಷ್ಯದಲ್ಲಿ ಸ್ಥಿರತೆ ಮತ್ತು ಭದ್ರತೆ ಒದಗಿಸಲು ಸಹಾಯ ಮಾಡುತ್ತದೆ. ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇಡುವುದರಿಂದ ಸಾಲ ನೀಡುವ ಸಂಸ್ಥೆಗಳು ತಮ್ಮ ದರಗಳನ್ನು ಹೆಚ್ಚಿಸುವುದಿಲ್ಲ. ಇದರಿಂದಾಗಿ ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಲಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗದು ಮೀಸಲು ಅನುಪಾತ ಶೇ 10ರಷ್ಟು ಹೆಚ್ಚಳ: ''ಹಣದುಬ್ಬರಕ್ಕೆ ಸಂಬಂಧಿಸಿದಂತೆ, ಆರ್‌ಬಿಐ ನಿಗದಿತ ಅವಧಿಗೆ ನಗದು ಮೀಸಲು ಅನುಪಾತವನ್ನು ಶೇ 10ರಷ್ಟು ಹೆಚ್ಚಿಸುವುದರೊಂದಿಗೆ ಹಣದುಬ್ಬರ ಪ್ರವೃತ್ತಿ ಶೀಘ್ರದಲ್ಲೇ ನಿಯಂತ್ರಣಕ್ಕೆ ಬರಲಿದೆ ಎಂಬ ಭರವಸೆ ವ್ಯಕ್ತಪಡಿಸಿದೆ. ಯುಪಿಐ ಪಾವತಿಗಳು ಮತ್ತು ಆಫ್​ಲೈನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಆರ್‌ಬಿಐ ನಿರ್ಧಾರವು ಸಣ್ಣ ಖರೀದಿಗಳನ್ನು ವಿಶೇಷವಾಗಿ ಇಂಟರ್‌ನೆಟ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಹೆಚ್ಚಿಸಲಿದೆ. ಈ ನಿರ್ಧಾರದ ಫಲಿತಾಂಶವು ಮುಂಬರುವ ತಿಂಗಳುಗಳಲ್ಲಿ ಗೋಚರಿಸಲಿದೆ'' ಎಂದಿದ್ದಾರೆ.

ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಬೆಳವಣಿಗೆ ಇಳಿಕೆ: ಜಿಡಿಪಿ ಮುನ್ಸೂಚನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಇದು ಸಮಂಜಸವಾದ ಆಶಾವಾದಿತನ ತೋರಿಸುತ್ತದೆ. ಆದರೆ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಬೆಳವಣಿಗೆಯು ಕಡಿಮೆಯಾಗಿದೆ. ಬೆಳವಣಿಗೆಯನ್ನು ಮೇಲ್ಮುಖವಾಗಿ ತರಲು ಪರಿಹಾರ ಹುಡುಕಬೇಕಿದೆ ಎಂದು ಹೇಳಿದ್ದಾರೆ.

2ನೇ ಬಾರಿಗೆ ರೆಪೋ ದರ ಯಥಾಸ್ಥಿತಿ- ಶಕ್ತಿಕಾಂತ್​ ದಾಸ್: ವಿತ್ತೀಯ ನೀತಿ ಸಮಿತಿಯು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಸದ್ಯ ಇರುವ ರೆಪೋ ದರ ಶೇ 6.5ರಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಹೇಳಿದರು. ದ್ವೈಮಾಸಿಕ ಹಣಕಾಸು ನೀತಿ ಕುರಿತು ಮಾಹಿತಿ ನೀಡಿದ ಅವರು, ದೇಶದ ಆರ್ಥಿಕತೆ ಉತ್ತಮವಾದ ಬೆಳವಣಿಗೆ ಸಾಧಿಸುತ್ತಿದೆ. ದೇಶವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಜಾಗತಿಕ ಬೆಳವಣಿಗೆಗೆ ಸುಮಾರು ಶೇ 15 ಕೊಡುಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಎರಡನೇ ಬಾರಿಗೆ ರೆಪೋ ದರ ಬದಲಿಲ್ಲ; ಉತ್ತಮ ಸ್ಥಿತಿಯಲ್ಲಿ ದೇಶದ ಆರ್ಥಿಕತೆ - ಶಕ್ತಿಕಾಂತ್​ ದಾಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.