ETV Bharat / state

ರೇಣುಕಾಚಾರ್ಯ ತಂಡದ ದೆಹಲಿ ಪ್ರವಾಸಕ್ಕೆ ಬಿಎಸ್​ವೈ ಬ್ರೇಕ್: ಹೈಕಮಾಂಡ್ ಭೇಟಿ ಮಾಡದಂತೆ ಸೂಚನೆ

ಇಂದು ರಾತ್ರಿ ನವದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮತ್ತು ನಿಯೋಗಕ್ಕೆ, ಪ್ರವಾಸ ಕೈಗೊಳ್ಳದಂತೆ ಸಿಎಂ ಬಿಎಸ್​ವೈ ಸೂಚನೆ ನೀಡಿದ್ದಾರೆ.

delhi-tour
ದೆಹಲಿ ಪ್ರವಾಸಕ್ಕೆ ಬಿಎಸ್​ವೈ ಬ್ರೇಕ್
author img

By

Published : Jul 20, 2021, 11:36 AM IST

ಬೆಂಗಳೂರು: ಹೈಕಮಾಂಡ್ ಭೇಟಿಗೆ ಮುಂದಾಗಿದ್ದ ಆಪ್ತ ಶಾಸಕರ ಬಣದ ನಿಯೋಗಕ್ಕೆ ನವದೆಹಲಿ ಪ್ರವಾಸ ಕೈಗೊಳ್ಳದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಶಾಸಕರ ನಿಯೋಗ ಪ್ರವಾಸವನ್ನು ರದ್ದುಗೊಳಿಸಿದೆ.

ಇಂದು ರಾತ್ರಿ ನವದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಸ್ವಕ್ಷೇತ್ರ ಹೊನ್ನಾಳಿಯಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ದೂರವಾಣಿ ಕರೆ ಮಾಡಿದ ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳದಂತೆ ಸೂಚನೆ ನೀಡಿದರು. ಹೀಗಾಗಿ ಶಾಸಕರ ನಿಯೋಗ ತನ್ನ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದು, ಮತ್ತೊಮ್ಮೆ ಹೈಕಮಾಂಡ್ ನಾಯಕರ ಅನುಮತಿ ಪಡೆದು ತೆರಳಲು ನಿರ್ಧರಿಸಿದೆ.

ನಾಯಕತ್ವ ಬದಲಾವಣೆ ಮಾಡದಂತೆ ಹೈಕಮಾಂಡ್​ಗೆ ಮನವಿ ಸಲ್ಲಿಸಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದ ರೇಣುಕಾಚಾರ್ಯ, ಸಿಎಂ ಪರ ಶಾಸಕರ ಸಹಿ ಸಂಗ್ರಹಿಸಿದ್ದರು. ಶಾಸಕರ ಸಹಿವುಳ್ಳ ಪತ್ರವನ್ನು ಹೈಕಮಾಂಡ್​ಗೆ ನೀಡಿ ಯಡಿಯೂರಪ್ಪ ಮುಂದುವರಿಕೆಗೆ ಮನವಿ ಮಾಡಲೆಂದು ಶಾಸಕರ ನಿಯೋಗದೊಂದಿಗೆ ತೆರಳಲು ರೇಣುಕಾಚಾರ್ಯ ನಿರ್ಧರಿಸಿದ್ದರು. ಆದರೆ ಈಗ ಈ ಪ್ರವಾಸ ಮೊಟಕುಗೊಂಡಿದೆ.

ದೆಹಲಿ ವಿಶೇಷ ಪ್ರತಿನಿಧಿ ಜೊತೆ ಸಭೆ:

ದೆಹಲಿಗೆ ತೆರಳದಂತೆ ಸಿಎಂ ಸೂಚನೆ ಬರುತ್ತಿದ್ದಂತೆ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್​ರನ್ನು ಸಂಪರ್ಕಿಸಿದ ರೇಣುಕಾಚಾರ್ಯ ದೆಹಲಿ ಪ್ರವಾಸ ರದ್ದುಪಡಿಸಿರುವ ಮಾಹಿತಿ ನೀಡಿದರು. ನಂತರ ಬೆಂಗಳೂರಿನಲ್ಲಿಯೇ ಇದ್ದ ಪಾಟೀಲ್, ರೇಣುಕಾಚಾರ್ಯ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದರು. ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದರು.

ಸಿಎಂ ಯಡಿಯೂರಪ್ಪ ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದ ವೇಳೆ ಅವರ ಜೊತೆ ಶಂಕರಗೌಡ ಪಾಟೀಲ್ ಕೂಡ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಘಟನೆಗಳೇನು ಎನ್ನುವ ಕುರಿತು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.