ETV Bharat / state

ಧರ್ಮಗುರುಗಳು, ಜನಪ್ರತಿನಿಧಿಗಳು ಬ್ರೈನ್ ವಾಷ್ ಮಾಡಬಾರದು: ಸಚಿವ ಶೆಟ್ಟರ್ - minister shetter

ಕೊರೊನಾ ಯಾವ ಜಾತಿ, ಧರ್ಮಕ್ಕೆ ಸಂಬಂಧಪಟ್ಟ ರೋಗ ಅಲ್ಲ. ಹಾಗಾಗಿ ಎಲ್ಲ ಧರ್ಮದವರೂ ಇದರ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಸಚಿವ ಜಗದೀಶ್​​ ಶೆಟ್ಟರ್ ಹೇಳಿದ್ದಾರೆ.

ಸಚಿವ ಶೆಟ್ಟರ್
ಸಚಿವ ಶೆಟ್ಟರ್
author img

By

Published : Apr 20, 2020, 5:26 PM IST

ಬೆಂಗಳೂರು: ಧರ್ಮ ಗುರುಗಳು, ಜನಪ್ರತಿನಿಧಿಗಳು ಯುವಕರ ಮನಸು ಬದಲಾವಣೆ ಮಾಡುವ ಕೆಲಸ‌ ಮಾಡಬೇಕು. ಅದು ಬಿಟ್ಟು ಬ್ರೈನ್ ವಾಷ್ ಮಾಡುವ ಕೆಲಸ‌ ಮಾಡಬಾರದು ಎಂದು ಸಚಿವ ಜಗದೀಶ್​ ಶೆಟ್ಟರ್ ಕಿಡಿ ಕಾರಿದರು.

ವಿಧಾನಸೌಧಲ್ಲಿ ಮಾತನಾಡಿದ ಅವರು, ಕೊರೊನಾ ಯಾವ ಜಾತಿ, ಧರ್ಮಕ್ಕೆ ಸಂಬಂಧಪಟ್ಟ ರೋಗ ಅಲ್ಲ. ಹಾಗಾಗಿ ಎಲ್ಲ ಧರ್ಮದವರೂ ಇದರ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಇತ್ತೀಚೆಗೆ ಕುಡುಚಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಾನೇ ಸೂಚನೆ ನೀಡಿದ್ದೆ. ಬಳಿಕ ಈಗ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಇದು ವೈರಾಣು ವಿರುದ್ಧದ ಹೋರಾಟ ಎಂದರು.

ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಶೆಟ್ಟರ್​​

ಆಶಾ ಕಾರ್ಯಕರ್ತರು ನಿಮ್ಮ ರಕ್ಷಣೆಗೆ ಬಂದಿದ್ದಾರೆ. ಅವರು ನಿಮ್ಮನ್ನು ಜೈಲಿಗೆ ಕೊಂಡೊಯ್ಯಲು ಬಂದಿಲ್ಲ. ಕ್ವಾರಂಟೈನ್ ಮಾಡಿದ್ರೆ ನಿಮ್ಮ ಆರೋಗ್ಯ ಸರಿ ಹೋಗುತ್ತೆ. ಈ ರೀತಿ ಘಟನೆ‌ ಮರುಕಳಿಸಬಾರದು. ಇಲ್ಲವಾದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಯಾರು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಅವರನ್ನು ಅರೆಸ್ಟ್ ಮಾಡಿ. ಅವರ ಮೇಲೆ ಎಫ್​ಐಆರ್ ದಾಖಲೆ ಮಾಡಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.