ETV Bharat / state

36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ನೋಟಿಸ್ ರವಾನೆ...

ಬಿಬಿಎಂಪಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ರವಾನಿಸಿದ್ರು ಕೂಡಾ, ಬೆಡ್ ಇಲ್ಲ ಎಂಬ ಕಾರಣ ಹೇಳಿ ಖಾಸಗಿ ಆಸ್ಪತ್ರೆಗಳು ವಾಪಾಸು ಕಳಿಸಿವೆ. ಇಂಥಹಾ 36 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ರವಾನಿಸಿದೆ.

Bangalore
ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ನೋಟಿಸ್
author img

By

Published : Sep 16, 2020, 10:55 PM IST

ಬೆಂಗಳೂರು: ಕೋವಿಡ್ ನಿಯಂತ್ರಿಸುವ ಹಿನ್ನೆಲೆ, ಖಾಸಗಿ ಆಸ್ಪತ್ರೆಗಳಲ್ಲಿನ ಶೇಕಡಾ 50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ಸೂಚಿಸುವ ಕೋವಿಡ್ ರೋಗಿಗಳಿಗೆ ಮೀಸಲಿಡಬೇಕೆಂಬ ನಿಯಮವಿದೆ. ಆದ್ರೆ ಬಿಬಿಎಂಪಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ರವಾನಿಸಿದ್ರು ಕೂಡಾ, ಬೆಡ್ ಇಲ್ಲ ಎಂಬ ಕಾರಣ ಹೇಳಿ ಖಾಸಗಿ ಆಸ್ಪತ್ರೆಗಳು ವಾಪಾಸು ಕಳಿಸಿವೆ. ಇಂಥಹಾ 36 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ರವಾನಿಸಿದೆ.

50 ರಿಂದ 100 ಬೆಡ್​ಗಳ ಆಸ್ಪತ್ರೆ: ರಾಮಯ್ಯ ಆಸ್ಪತ್ರೆ, ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿ., ರಕ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ವಿಜಯಶ್ರೀ ಆಸ್ಪತ್ರೆ, ಇಹಾ ಆಸ್ಪತ್ರೆ, ಶುಶ್ರೂಷಾ ಆಸ್ಪತ್ರೆ, ನ್ಯೂ ಹಾಸ್ಪಿಟಲ್, ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ, ಶ್ರೀನಿವಾಸಂ ಕ್ಯಾನ್ಸರ್ ಕೇರ್, ರಿಪಬ್ಲಿಕ್ ಆಸ್ಪತ್ರೆ.

20-50 ಬೆಡ್​ಗಳ ಆಸ್ಪತ್ರೆ:

1.ಫೋರ್ಟೀಸ್ ನಾಗರಬಾವಿ
2.ಅಪೂರ್ವ
3.ಫೋರ್ಟೀಸ್ ರಾಜಾಜಿನಗರ
4.ಫೋರ್ಟೀಸ್ ಬನ್ನೇರುಘಟ್ಟ
5.ಪಿಎಮ್ ಸಂತೋಷ್

100 ಕ್ಕಿಂತ ಹೆಚ್ಚು ಬೆಡ್ ಇರುವ ಆಸ್ಪತ್ರೆ:
1.ಅಪೊಲೋ ಆಸ್ಪತ್ರೆ
2.ಬ್ಯಾಪ್ಟಿಸ್ಟ್
3.ಹೆಚ್ ಬಿಎಸ್ ಹಾಸ್ಪಿಟಲ್
4.ನಾರಾಯಣ ಹೃದಯಾಲಯ
5.ಸಕ್ರ
6.ಪಲ್ಸ್
7.ಸಿಟಿ
8.ಮಣಿಪಾಲ್
9.ವಿಕ್ರಮ್
10.ಸಂತೋಷ್
11.ಸಾಗರ್ ಆಸ್ಪತ್ರೆ ಜಯನಗರ
12.ಬಿಜಿಎಸ್
13.ಸ್ಪೆಷಲಿಸ್ಟ್ ಹೆಲ್ತ್
14.ವೇಗ ಆಸ್ಪತ್ರೆ
15.ಶಿಫಾ
16.ನ್ಯೂ ಜನಪ್ರಿಯ ಆಸ್ಪತ್ರೆ
17.ನಂದನ ಹೆಲ್ತ್ ಕೇರ್
18.ಮೆಡಿಹೋಪ್ ಆಸ್ಪತ್ರೆ

ಸರ್ಕಾರಕ್ಕೆ ಮೀಸಲಿಟ್ಟ ಬೆಡ್​ಗಳನ್ನೂ ಕೂಡಾ ಬ್ಲಾಕ್ ಮಾಡದೆ ನಿಯಮಬಾಹಿರವಾಗಿ ನಡೆದುಕೊಂಡಿವೆ. ಹೀಗಾಗಿ 48 ಗಂಟೆಗಳ ಗಡುವು ನೀಡಿದ್ದು, ಮೀಸಲಿಡಬೇಕಾದ ಹಾಸಿಗೆಗಳ ವಿವರ ನೀಡಬೇಕು, ಇಲ್ಲವಾದಲ್ಲಿ ಆಸ್ಪತ್ರೆಯ ನೋಂದಣಿ ರದ್ದು ಮಾಡಿ, ಜೈಲುಶಿಕ್ಷೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ಸರ್ಕಾರ ಸೂಚಿಸಿದ ರೋಗಿಗಳು, ಖಾಸಗಿ ರೋಗಿಗಳು ದಾಖಲಾಗಿರುವ ಮಾಹಿತಿ ಹಾಗೂ ಕೋವಿಡ್ ಹೊರತುಪಡಿಸಿದ ರೋಗಿಗಳ ಮಾಹಿತಿಯನ್ನು ಎಸ್​ಎಎಸ್​ಟಿ (SAST) ಪೋರ್ಟಲ್​ನಲ್ಲಿ ನಮೂದಿಸಬೇಕೆಂದು ತಿಳಿಸಿದೆ.

ಈ ಎಲ್ಲಾ ಮಾಹಿತಿಯನ್ನು ನೋಡಲ್ ಅಧಿಕಾರಿಗೆ 24 ಗಂಟೆಯೊಳಗೆ ನೀಡಬೇಕು. ಇಲ್ಲವಾದಲ್ಲಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.