ಬೆಂಗಳೂರು: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಶೇ.20ರಷ್ಟು ಕಳೆದ ವರ್ಷಕ್ಕಿಂತ ಮದ್ಯ ವ್ಯಾಪಾರ ಇಳಿಕೆಯಾಗಿದೆ ಹಾಗೂ ಈ ಬಾರಿ ಡಿಸೆಂಬರ್ 31ಕ್ಕೆ ಕೇವಲ 150 ಕೋಟಿ ಮದ್ಯ ಮಾತ್ರ ಮಾರಾಟ ಆಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಕೊರೊನಾ ರೂಪಾಂತರ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದ ಕಾರಣ ರಾತ್ರಿ 11:30ಕ್ಕೆ ಮದ್ಯದಂಗಡಿ ಮುಚ್ಚಿದ್ದರಿಂದ ಮದ್ಯ ಮಾರಾಟ ಇಳಿಕೆಯಾಗಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ150 ಕೋಟಿ ಮದ್ಯ ಮಾರಾಟ ವಹಿವಾಟು ಆಗಿದ್ದು, 1.73 ಲಕ್ಷ ಬಾಕ್ಸ್ ಬಿಯರ್ ಸೇಲ್ ಆಗಿದೆ. ಭಾರತ ಮೂಲದ 2.23 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.
ಸಂಜೆ 4ಕ್ಕೆ ಪೂರ್ಣ ಮಾಹಿತಿ ನೀಡುವುದಾಗಿ ಅಬಕಾರಿ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.