ETV Bharat / state

ಅಬಕಾರಿ ಇಲಾಖೆಗೆ ಕಿಕ್ಕೇರಿಸಿದ ಹೊಸ ವರ್ಷ.. ಲಕ್ಷಾಂತರ ಲೀಟರ್​ ಮದ್ಯ ಮಾರಾಟ, ನೂರಾರು ಕೋಟಿ ಆದಾಯ - ದಾಖಲೆಯ ಮದ್ಯ ಮಾರಾಟ

ಹೊಸ ವರ್ಷ ಹಿನ್ನಲೆ - ಲಕ್ಷ ಲಕ್ಷ ಲೀಟರ್ ಲೀಟರ್ ಮದ್ಯ ಮಾರಾಟ - 1262 ಕೋಟಿ ರೂಪಾಯಿ ಮದ್ಯ ಮಾರಾಟ

record-liquor-sales-for-new-year-celebration
ಹೊಸ ವರ್ಷದ ಹಿನ್ನೆಲೆ ಲಕ್ಷ ಲಕ್ಷ ಲೀಟರ್ ಲೀಟರ್ ಮದ್ಯ ಮಾರಾಟ: ಅಬಕಾರಿ ಇಲಾಖೆಗೆ ನೂರಾರು ಕೋಟಿ ಆದಾಯ
author img

By

Published : Jan 1, 2023, 10:20 PM IST

ಬೆಂಗಳೂರು : ಹೊಸ ವರ್ಷದ ಹಿನ್ನೆಲೆ ಲಕ್ಷ ಲಕ್ಷ ಲೀಟರ್ ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಐದು ದಿನದಲ್ಲಿ ಭರ್ಜರಿಯಾಗಿ ಮದ್ಯ ಮಾರಾಟವಾಗಿದೆ.

ಡಿಸೆಂಬರ್ 27ರಂದು 3.57 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್), 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಐಎಂಎಲ್, 1.67 ಲಕ್ಷ ಲೀಟರ್ ಬಿಯರ್ ಮಾರಾಟವಾದರೆ, ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಐಎಂಎಲ್, 1.93 ಲಕ್ಷ ಲೀಟರ್ ಬಿಯರ್​​ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್ 30ರಂದು 2.93 ಲಕ್ಷ ಲೀಟರ್ ಐಎಂಎಲ್, 2.59 ಲಕ್ಷ ಲೀಟ‌ರ್​ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 31 ರಂದು 3 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.

1262 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ : ಸೇಲ್ ವ್ಯಾಲ್ಯೂ ಬರೋಬ್ಬರಿ 181 ಕೋಟಿ ರೂಪಾಯಿಯಾದರೆ, ಕಳೆದ 9 ದಿನ ಅಂದರೆ ಡಿಸೆಂಬರ್ 23ರಿಂದ 31ರವರೆಗಿನ ಸೇಲ್ ವ್ಯಾಲ್ಯೂ 1262 ಕೋಟಿ ರೂಪಾಯಿಗಳಾಗಿದೆ. ಒಟ್ಟು ಒಂದು ವಾರದಲ್ಲಿ ಒಟ್ಟು 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಕೇರಳದಲ್ಲಿ ಮದ್ಯ ಮಾರಾಟ ಜೋರು..250 ಕೋಟಿ ಮೌಲ್ಯದ ಲಿಕ್ಕರ್​ ಬಿಕರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.