ETV Bharat / state

ಸಮಸ್ಯೆ ಪರಿಹರಿಸಿ ಇಲ್ಲಾ, ಸಮಸ್ಯೆಯಲ್ಲಿ ಸಿಲುಕಿ: ಸಿಎಂಗೆ ಅನರ್ಹ ಶಾಸಕರ ಎಚ್ಚರಿಕೆ?

ಕಾನೂನು ಹೋರಾಟದಲ್ಲಿ ಪ್ರಗತಿ ಕಾಣುತ್ತಿಲ್ಲ. ನಾವೆಲ್ಲಾ ನಿಜಕ್ಕೂ ಅತಂತ್ರರಾಗಿದ್ದೇವೆ. ಆದರೂ ಅಧಿಕಾರ ಅನುಭವಿಸುತ್ತಿರುವ ನೀವು ನಮ್ಮನ್ನು ಕಡೆಗಣಿಸಿದ್ದೀರಿ. ಸರ್ಕಾರ ರಚನೆಗೆ ಕಾರಣರಾದ ನಾವು ಈಗ ನಿಮಗೆ ಬೇಡವಾಗಿದ್ದೇವಾ? ಎಂದು ಅನರ್ಹ ಶಾಸಕರು ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಸಮಸ್ಯೆ ಪರಿಹರಿಸಿ ಇಲ್ಲ ಸಮಸ್ಯೆಗೆ ಸಿಲುಕಿ: ಸಿಎಂಗೆ ವಾರ್ನಿಂಗ್ ನೀಡಿದ್ರಾ ಅನರ್ಹ ಶಾಸಕರು?
author img

By

Published : Sep 14, 2019, 8:14 PM IST

ಬೆಂಗಳೂರು: ಅನರ್ಹ ಶಾಸಕರು ಇದೀಗ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. ನೆರವಿಗೆ ಧಾವಿಸಿದ ಸಿಎಂ ವಿರುದ್ಧವೇ ಗರಂ ಆಗಿದ್ದು ರಾತ್ರೋರಾತ್ರಿ ಸಿಎಂಗೆ ವಾರ್ನಿಂಗ್ ನೀಡಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ಧವಳಗಿರಿಗೆ ಅನರ್ಹ ಶಾಸಕರು ಭೇಟಿ ನೀಡಿದ್ದರು. ಮುನಿರತ್ನ ಹಾಗು ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ಅನರ್ಹ‌ ಶಾಸಕರ ತಂಡ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸರ್ಕಾರ ರಚನೆಗೂ ಮುನ್ನ ಇದ್ದಂತೆ ನೀವಿಲ್ಲ, ಬದಲಾಗಿದ್ದೀರಿ. ನಮಗೆ ನೀಡಿದ್ದ ಭರವಸೆಗಳು ಏನಾದವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ನೀವು ಹೇಳಿದ್ದು ಏನಾಯಿತು? ‌ಸ್ಟೇಟ್-ಸೆಂಟ್ರಲ್ ಮಾದರಿ ಏನಾಯ್ತು, ಕೋರ್ಟ್ ವಿಷಯ ಏನಾಯಿತು ಎಂದು ಸಾಲು ಸಾಲು ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದ್ದಾರೆ.

ಮುನಿರತ್ನ ಕೂಡ ತೀವ್ರ ಅಸಮಧಾನ ಹೊರಹಾಕಿದ್ದಾರೆ. ನಮ್ಮನ್ನು ಮೊದಲು‌ ಮಾತನಾಡಿಸುತ್ತಿದ್ದ ರೀತಿಗೂ ಈಗ ಮಾತನಾಡಿಸುತ್ತಿರುವ ರೀತಿಗೂ ವ್ಯತ್ಯಾಸ ಕಂಡು ಬಂದಿದೆ ಎಂದಿದ್ದಾರೆ.

ಹೆಚ್.ವಿಶ್ವನಾಥ್ ಕೂಡ‌ ಇದಕ್ಕೆ‌ ದನಿಗೂಡಿಸಿದ್ದಾರಂತೆ. ಹಿಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ‌ ಅಧಿಕಾರದ ಮದದಿಂದ ತಲೆ‌ತಿರುಗಿತ್ತು ಅದಕ್ಕೇ ಸರ್ಕಾರ ಪತನವಾಯಿತು. ಈಗಲೂ ಅದೇ ರೀತಿ‌ ಆದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ.

ಬಿ.ಸಿ ಪಾಟೀಲ್ ಸೇರಿ‌ ಇತರ ಅನರ್ಹ ಶಾಸಕರು ನಾವು ಅಶ್ವತ್ಥನಾರಾಯಣ್ ಮಾತು ಕೇಳಿ ಹಾಳಾದೆವು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ‌ಅಧಿಕಾರ‌ ಸಿಕ್ಕ ಮೇಲೆ ಯಾರೂ ನಮ್ಮ ಕೈಗೆ‌ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅನರ್ಹ ಶಾಸಕರ ಅಸಮಾಧಾನ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಅವರ ಸಮ್ಮುಖದಲ್ಲಿ ಅನರ್ಹರೊಂದಿಗೆ ಮಾತುಕತೆ ನಡೆಸಿದರು. ಹೊರಗಡೆ ಎಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಬೇಡಿ, ‌ಬಹಿರಂಗ ಹೇಳಿಕೆ ನೀಡಬೇಡಿ, ಈಗಷ್ಟೇ ಅಧಿಕಾರಕ್ಕೆ‌ ಬಂದಿದ್ದೇವೆ, ಆಡಳಿತ ನಡೆಸುವ ಅವಕಾಶ ಸಿಕ್ಕಿದೆ ಸ್ವಲ್ಪ ಸಮಯ ನೀಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಆದರೆ ಈ ಭರವಸೆಗೆ ಸಮಾಧಾನಗೊಳ್ಳದ ಅನರ್ಹ ಶಾಸಕರು ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಇಲ್ಲದೇ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎಚ್ಚರಿಕೆ ನೀಡಿ ಹೊರನಡೆದಿದ್ದಾರೆ ಎನ್ನಲಾಗಿದೆ.

Intro:KN_BNG_07_CM_DISQUALIFY_MLA_MEET_SCRIPT_9021933

ಸಮಸ್ಯೆ ಪರಿಹರಿಸಿ ಇಲ್ಲ ಸಮಸ್ಯೆಗೆ ಸಿಲುಕಿ: ಸಿಎಂಗೆ ವಾರ್ನಿಂಗ್ ನೀಡಿದ್ರಾ ಅನರ್ಹ ಶಾಸಕರು?

ಬೆಂಗಳೂರು: ಅನರ್ಹ ಶಾಸಕರು ಇದೀಗೆ ಬಿಜೆಪಿ ವಿರುದ್ಧ ತೀವ್ರ ಅಸಮಧಾನಗೊಂಡಿದ್ದಾರೆ, ನೆರವಿಗೆ ಧಾವಿಸಿದ ಸಿಎಂ ವಿರುದ್ಧವೇ ಗರಂ ಆಗಿದ್ದು ರಾತ್ರೋರಾತ್ರಿ ಸಿಎಂಗೆ ವಾರ್ನಿಂಗ್ ನೀಡಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ಧವಳಗಿರಿಗೆ ಅನರ್ಹ ಶಾಸಕರು ಭೇಟಿ ನೀಡಿದ್ದರು.ಮುನಿರತ್ನ ಹಾಗು ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ಅನರ್ಹ‌ಶಾಸಕರ ತಂಡ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸರ್ಕಾರ ರಚನೆಗೂ ಮುನ್ನ ಇದ್ದಂತೆ ನೀವಿಲ್ಲ, ಬದಲಾಗಿದ್ದೀರಿ, ನಮಗೆ ನೀಡಿದ್ದ ಭರವಸೆಗಳು ಏನಾದವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗರಂ ಆದರು ಎಂದು ತಿಳಿದುಬಂದಿದೆ.

ಕಾನೂನು ಹೋರಾಟದಲ್ಲಿ ಪ್ರಗತಿ ಕಾಣುತ್ತಿಲ್ಲ, ನಾವೆಲ್ಲಾ ನಿಜಕ್ಕೂ ಅತಂತ್ರರಾಗಿದ್ದೇವೆ,ಆದರೂ ಅಧಿಕಾರ ಅನುಭವಿಸುತ್ತಿರುವ ನೀವು ನಮ್ಮನ್ನು ಕಡೆಗಣಿಸಿದ್ದೀರಿ ಸರ್ಕಾರ ರಚನೆಗೆ ಕಾರಣರಾದ ನಾವು ಈಗ ನಿಮಗೆ ಬೇಡವಾಗಿದ್ದೇವಾ ಎಂದು ಅಸಮಧಾನ ಹೊರಹಾಕಿದರು ಎಂದು ತಿಳಿದುಬಂದಿದೆ.

ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ನೀವು ಹೇಳಿದ್ದು ಏನಾಯಿತು,‌ಸ್ಟೇಟ್-ಸೆಂಟ್ರಲ್ ಮಾದರಿ ಏನಾಯ್ತು, ಕೋರ್ಟ್ ವಿಷಯ ಏನಾಯಿತು ಎಂದು ಸಾಲು ಸಾಲು ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದ್ದಾರೆ.ಮುನಿರತ್ನ ಕೂಡ ತೀವ್ರ ಅಸಮಧಾನ ಹೊರಹಾಕಿದ್ದಾರೆ, ನಮ್ಮನ್ನು ಮೊದಲು‌ ಮಾತನಾಡಿಸುತ್ತಿದ್ದ ರೀತಿಗೂ ಈಗ ಮಾತನಾಡಿಸುತ್ತಿರುವ ರೀತಿಗೂ ವ್ಯತ್ಯಾಸ ಕಂಡಯಬಂದಿದೆ ಎಂದಿದ್ದಾರೆ. ಹೆಚ್.ವಿಶ್ವನಾಥ್ ಕೂಡ‌ ಇದಕ್ಕೆ‌ ದನಿಗೂಡಿಸಿದ್ದಾರೆ.ಹಿಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ‌ ಅಧಿಕಾರದ ಮದದಿಂದ ತಲೆ‌ತಿರುಗಿತ್ತು ಅದಕ್ಕೇ ಸರ್ಕಾರ ಪತನವಾಯಿತು ಈಗಲೂ ಅದೇ ರೀತಿ‌ ಆದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿ.ಸಿ ಪಾಟೀಲ್ ಸೇರಿ‌ ಇತರ ಅನರ್ಹ ಶಾಸಕರು ನಾವು ಅಶ್ವತ್ಥನಾರಾಯಣ್ ಮಾತು ಕೇಳಿ ಹಾಳಾದೆವು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ,‌ಅಧಿಕಾರ‌ ಸಿಕ್ಕ‌ ಮೇಲೆ ಯಾರೂ ನಮ್ಮ‌ಕೈಗೆ‌ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ

ಅನರ್ಹ ಶಾಸಕರ ಅಸಮಧಾನ ಹಿನ್ನಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಅವರ ಸಮ್ಮುಖದಲ್ಲಿ ಅನರ್ಹರೊಂದಿಗೆ ಮಾತುಕತೆ ನಡೆಸಿದರು.ಹೊರಗಡೆ ಎಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಬೇಡಿ,‌ಬಹಿರಂಗ ಹೇಳಿಕೆ ನೀಡಬೇಡಿ,
ಈಗಷ್ಟೇ ಅಧಿಕಾರಕ್ಕೆ‌ ಬಂದಿದ್ದೇವೆ ಆಡಳಿತ ನಡೆಸುವ ಅವಕಾಶ ಸಿಕ್ಕಿದೆ ಸ್ವಲ್ಪ ಸಮಯ ನೀಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಆದರೆ ಈ ಭರವಸೆಗೆ ಸಮಾಧಾನಗೊಳ್ಳದ ಅನರ್ಹ ಶಾಸಕರು ನಮ್ಮ‌ ಸಮಸ್ಯೆಗಳನ್ನು ಪರಿಹರಿಸಬೇಕು ಇಲ್ಲದೇ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎಚ್ಚರಿಕೆ ನೀಡಿ ಹೊರನಡೆದಿದ್ದಾರೆ ಎನ್ನಲಾಗಿದೆ.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.