ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಅನಾರೋಗ್ಯದಿಂದ ಪೊಲೀಸರ ಭದ್ರತೆಯೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಪಾತಕಿ ರವಿ ಪೂಜಾರಿ ಹೊಸ ವರಸೆ ಶುರು ಹಚ್ಚಿಕೊಂಡಿದ್ದಾನೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯುವಂತೆ ಪೊಲೀಸರಿಗೆ ಸವಾಲು ಹಾಕಿದ್ದಾನೆ.
ನನ್ನನ್ನು ನೀವು ಸುಲಭವಾಗಿ ಬಂಧಿಸಿದ್ದೀರಿ. ಆದರೆ, ದಾವೂದ್ ಇನ್ನೂ ಕ್ರೈಂನಲ್ಲಿ ಭಾಗಿಯಾಗ್ತಾ ಆ್ಯಕ್ಟಿವ್ ಆಗಿದ್ದಾನೆ. ಆತನನ್ನು ಸೆರೆಹಿಡಿದು ತೋರಿಸಿ ಎಂದು ಚಾಲೆಂಜ್ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಅಲ್ಲದೇ, ಸುಖಾ ಸುಮ್ಮನೆ ನನ್ನನ್ನ ಬೇರೆ-ಬೇರೆ ಕೇಸ್ಗಳಲ್ಲಿ ಲಾಕ್ ಮಾಡಲಾಗುತ್ತಿದೆ. ನನಗೂ ಕೆಲವು ಕೇಸ್ಗಳಿಗೆ ಸಂಬಂಧವೇ ಇಲ್ಲ. ಸಿಬಿಐ ಅಧಿಕಾರಿಗಳು ಏನು ಹೇಳಲ್ಲ. ಬರೀ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಬಳಿಕ ಮುಂಬೈ ಪೊಲೀಸರು ಬರುತ್ತಾರೆ, ಅವರು ಏನೂ ಹೇಳದೇ ಕೇಸ್ ಫೈಲ್ಗಳಿಗೆ ಸಹಿ ಹಾಕಿಸಿಕೊಂಡು ಹೋಗುತ್ತಾರೆ ಎಂದು ರವಿ ಪೂಜಾರಿ ಆರೋಪಿಸಿದ್ದಾನೆ.
ಇದನ್ನೂ ಓದಿ: ನಿಲ್ಲದ ಕಾಮುಕರ ಅಟ್ಟಹಾಸ : 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ
ಈ ಹಿಂದೆ ಭೂಗತ ಲೋಕದಲ್ಲಿ ಸಕ್ರಿಯವಾಗಿದ್ದೆ. ಬೆಂಗಳೂರು ಸೇರಿ ಹಲವೆಡೆ ನಾನು ಬೆದರಿಕೆ ಹಾಗೂ ಇತರ ಕೃತ್ಯ ನಡೆಸಿದ್ದು ಸತ್ಯ. ಆದರೆ, ಆಫ್ರಿಕದ ಸೆನೆಗಲ್ ಸೇರಿದ ಬಳಿಕ ನಾನು ಕ್ರೈಂನಲ್ಲಿ ಭಾಗಿಯಾಗಿಲ್ಲ. ನನ್ನ ಹೆಸರಿನಲ್ಲಿ ಬೇರೆ ಯಾರೋ ತಪ್ಪು ಮಾಡಿರಬಹುದು. ಸೆನೆಗಲ್ನಲ್ಲಿ ನಾನು 250 ಹೆಕ್ಟೆರ್ ಜಮೀನು ಹೊಂದಿದ್ದು, ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನ್ಯಾಕೆ ಮತ್ತೆ ಕ್ರೈಂನಲ್ಲಿ ಭಾಗಿಯಾಗಲಿ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಬಾಡಿ ವಾರೆಂಟ್ ಮೂಲಕ ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ಎಸಿಎಂಎಂ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರು ಅರ್ಜಿ ಹಾಕಿದ್ದಾರೆ. ಪೂಜಾರಿ ಕೇರಳದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.