ETV Bharat / state

ತುಳುನಲ್ಲೇ ಪ್ರಶ್ನೆ ಕೇಳಿ, ಮೀನೂಟ, ಡ್ರಿಂಕ್ಸ್ ಕೊಟ್ರೆ ಮಾತ್ರ ಉತ್ತರ: ಪೊಲೀಸರ ಮುಂದೆ ಗಂಟೆ ಬಾರಿಸುತ್ತಿದ್ದಾನೆ 'ಪೂಜಾರಿ'

author img

By

Published : Mar 15, 2020, 4:06 PM IST

ನನಗೆ ಕನ್ನಡ ಬರಲ್ಲ, ತುಳುವಿನಲ್ಲಿ ಪ್ರಶ್ನೆ ಕೇಳಿ. ಮೀನೂಟ, ಡ್ರಿಂಕ್ಸ್​ ಇಲ್ದಿದ್ರೆ ನಿದ್ರೆ ಬರಲ್ಲ. ಅವನ್ನು ಕೊಟ್ರೆ ಮಾತ್ರ ನಾನು ತನಿಖೆಗೆ ಸಹಕರಿಸುತ್ತೇನೆ ಎಂದು ಡಾನ್​ ರವಿ ಪೂಜಾರಿ ತನಿಖಾಧಿಕಾರಿಗಳಿಗೆ ಕಾಟ ಕೊಡುತ್ತಿದ್ದು, ಇದು ಪೊಲೀಸರಿಗೆ ತಲೆನೋವಾಗಿದೆ.

ravi-poojari
ರವಿ ಪೂಜಾರಿ

ಬೆಂಗಳೂರು: ನನಗೆ ಕನ್ನಡ ಬರಲ್ಲ. ತುಳುವಿನಲ್ಲಿ ಪ್ರಶ್ನೆ ಕೇಳಿ, ನನಗೆ ಮೀನೂಟ, ಡ್ರಿಂಕ್ಸ್​ ಇಲ್ಲದೆ ನಿದ್ದೆ ಬರುವುದಿಲ್ಲ, ಮೀನು ಊಟ ಕೊಟ್ಟರೆ ಮಾತ್ರ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ತನಿಖಾಧಿಕಾರಿಗಳನ್ನು ಡಾನ್​ ರವಿ ಪೂಜಾರಿ ಪೀಡಿಸುತ್ತಿದ್ದಾನೆ.

ರವಿ ಪೂಜಾರಿಯ ತನಿಖೆ ಅತ್ಯಂತ ಪ್ರಮುಖವಾಗಿರುವ ಕಾರಣ ಆತನ ಭಾಷೆಗೆ ಒಗ್ಗುವ ಅಧಿಕಾರಿಗಳನ್ನು ಹಿರಿಯ ಅಧಿಕಾರಿಗಳು ಬಿಟ್ಟಿದ್ದು ತನಿಖೆ ನಡೆಸುವಾಗ ಆತನ ಎಲ್ಲಾ ಹೇಳಿಕೆಗಳನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ ತನಿಖಾಧಿಕಾರಿಗಳು ಪ್ರಶ್ನಿಸಿದಾಗ ತನ್ನನ್ನು ಯಾವುದೇ ಕಾರಣಕ್ಕೂ ಮುಂಬೈ, ಪೊಲೀಸರ ವಶಕ್ಕೆ ನೀಡಬೇಡಿ ಎಂದು ಅಂಗಲಾಚುತ್ತಿದ್ದಾನೆ. ದಾವೂದ್ ಗುಂಪಿನ 21ಜನರನ್ನು ಹತ್ಯೆ ಮಾಡಿದ್ದು ಈ ಸಂಧರ್ಭದಲ್ಲಿ ದಾವೂದ್ ಗುಂಪಿನವರು ತನ್ನ ಮೇಲೆ ಸೇಡು ತೀರಿಸಿಕೊಳ್ಳುವ ಅಪಾಯವಿದೆ. ನನ್ನ ಹತ್ಯೆಗೆ ಸ್ಕೆಚ್​ ಹಾಕಿದ್ದಾರೆ ಎಂದು ಪೂಜಾರಿ, ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ.

ರವಿ ಪೂಜಾರಿಯನ್ನ ಮುಂಬೈ ಪೊಲೀಸರು ಹಸ್ತಾಂತರಿಸುವಂತೆ ಕೇಳಿಕೊಂಡಿದ್ದು, ಈಗಾಗಲೇ ಕರ್ನಾಟಕದಲ್ಲಿ 47 ಕೇಸ್​ಗಳು ಪೂಜಾರಿ ಮೇಲಿವೆ. ಅದರಲ್ಲಿ 23 ಕೇಸ್​​ಗಳನ್ನು ಸಿಸಿಬಿ ತನಿಖೆ ನಡೆಸುತ್ತಿದೆ. ಹೀಗಾಗಿ ಕೇಸುಗಳ ತನಿಖೆ ನಡೆಸಿ ಹಸ್ತಾಂತರಿಸಲು ಮುಂದಾಗಿದೆ. ಎಂದು ಈಟಿವಿ ಭಾರತ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.