ETV Bharat / state

ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಖಂಡಿಸಿದ ರವಿಕುಮಾರ್

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ravi kumar reacts on congress protest
ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆಯನ್ನು ಖಂಡಿಸಿದ ರವಿಕುಮಾರ್
author img

By

Published : Jul 22, 2022, 7:52 PM IST

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸ್ವಾತಂತ್ರ್ಯ ಹೋರಾಟಗಾರರು ದೇಣಿಗೆ ಕೊಟ್ಟಿದ್ದಾರೆ. ಇದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನೆ ಆಸ್ತಿಯಲ್ಲ. ಸಾವಿರಾರು ಕೋಟಿ ಆಸ್ತಿ ಇರುವ ಸಂಸ್ಥೆ ಇದು. ಇದರ ತನಿಖೆ ಮಾಡಬಾರದೇ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ, ನ್ಯಾಯಾಲಯ, ಪ್ರಜಾಪ್ರಭುತ್ವ, ಸಂಸತ್ತಿಗಿಂತ ದೊಡ್ಡವರು ಎಂದು ಕಾಂಗ್ರೆಸ್‍ನವರು ಭಾವಿಸಿದ್ದಾರೆ. ರಾಷ್ಟ್ರಪತಿ, ಸುಪ್ರೀಂಕೋರ್ಟ್, ಸಿಬಿಐ, ಐಟಿ, ಇಡಿ ಇವೆಲ್ಲವೂ ನಮ್ಮ ಸಂವಿಧಾನ ವ್ಯವಸ್ಥೆಯಡಿ ಬರುತ್ತವೆ. ಕಾಂಗ್ರೆಸ್ ನಾಯಕರು ಕಾನೂನಿಗಿಂತ ದೊಡ್ಡವರೇ ಎಂದು ಉತ್ತರ ಕೊಡಲಿ ಎಂದು ಒತ್ತಾಯಿಸಿದರು.

ಇಡಿ,ಐಟಿ, ಸಿಬಿಐ ಈ ಮೊದಲೂ ಇದ್ದವು: ಸದ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರದ ನಿರ್ದೇಶನದಂತೆ ಇಡಿ, ಐಟಿ, ಸಿಬಿಐ ಕಾರ್ಯ ನಿರ್ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಇವೆಲ್ಲವೂ ಬಿಜೆಪಿ ಸರ್ಕಾರ ಬಂದ ಬಳಿಕ ಸ್ಥಾಪಿತವಾದ ಸಂಸ್ಥೆಗಳಲ್ಲ. ಮೊದಲಿನಿಂದಲೂ ಈ ವ್ಯವಸ್ಥೆಗಳು ಜಾರಿಯಲ್ಲಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನರೇಂದ್ರ ಮೋದಿ ಅವರನ್ನು ಇಡಿ ತನಿಖೆಗೆ ಒಳಪಡಿಸಲಿಲ್ಲವೇ? ಅಮಿತ್ ಶಾ ವಿರುದ್ಧ ಸಿಬಿಐ ತನಿಖೆ ನಡೆದಿಲ್ಲವೇ? ಅಮಿತ್ ಶಾ ಅವರು ಜೈಲಿಗೆ ಹೋಗಿರಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಅವಶ್ಯಕತೆ ಬಿಜೆಪಿಗೆ ಇಲ್ಲ. ನೀವು ಈವರೆಗೆ ಅನೇಕ ಸರ್ಕಾರಗಳನ್ನು ಕಿತ್ತು ಹಾಕಿದ್ದೀರಿ. ಪತ್ರಿಕೆಗಳನ್ನು ನಿರ್ಬಂಧಿಸಿದ್ದೀರಿ. ನ್ಯಾಯಾಲಯದ ತೀರ್ಪನ್ನೇ ತಿರಸ್ಕರಿಸಿದ್ದೀರಿ. ಹೀಗೆಲ್ಲ ಇದ್ದು ಪ್ರತಿಭಟನೆ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದರು. ನರೇಂದ್ರ ಮೋದಿ, ಅಮಿತ್ ಶಾ ಅವರ ವಿಚಾರಣೆ ವೇಳೆ ಬಿಜೆಪಿ ಹೋರಾಟ ಮಾಡಿತ್ತೇ? ನಮ್ಮ ನಾಯಕರು ಸಂವಿಧಾನಕ್ಕಿಂತ ದೊಡ್ಡವರೆಂದು ನಾವೆಂದೂ ಹೇಳಿಲ್ಲ. ನಾವು ಸಂವಿಧಾನ, ಕಾನೂನು ಕಟ್ಟಳೆಗೆ ಒಳಪಟ್ಟೇ ಆಡಳಿತ ಮಾಡುತ್ತಿದ್ದೇವೆ ಎಂದರು.

ಇಡಿ - ಸಿಬಿಐ ತೆಗೆದು ಹಾಕ್ತೇವಿ ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಿ: ಇಡಿ ವಿಚಾರಣೆ ನಡೆಸಬಾರದು ಎನ್ನುವ ಆಗ್ರಹದ ಜೊತೆಗೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಿಮಗೆ ಈ ಸಂಸ್ಥೆಗಳ ಮೇಲೆ ಅನುಮಾನ ಇದ್ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುಪ್ರೀಂಕೋರ್ಟ್, ಇಡಿ, ಸಿಬಿಐ ಬಂದ್ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಸವಾಲೆಸೆದರು.

ಇದನ್ನೂ ಓದಿ: ಭ್ರಷ್ಟಾಚಾರ ಕುರಿತು ಬಹಿರಂಗ ಚರ್ಚೆಗೆ ಸಿದ್ಧ: ಬಿಜೆಪಿ ನಾಯಕರಿಗೆ ಡಿಕೆಶಿ ಸವಾಲು!

ನಿನ್ನೆ ರಮೇಶ್‍ ಕುಮಾರ್ ಅವರು ಸತ್ಯವನ್ನು ಹೇಳಿದ್ದು, ಅವರನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್ ಆಡಳಿತದಲ್ಲಿ ಲೂಟಿ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಈಗ ಪ್ರತಿಭಟನೆ ಮಾಡದೇ ಇದ್ದರೆ ಊಟದಲ್ಲೂ ಹುಳ ಬೀಳುತ್ತದೆ ಎಂಬ ಸತ್ಯವಾದ ಮಾತನ್ನೇ ಆಡಿದ್ದಾರೆ ಎಂದು ಟೀಕಿಸಿದರು.

ರಮೇಶ್‍ಕುಮಾರ್ ಅವರಿಂದ ಆತ್ಮಸಾಕ್ಷಿಯ ಮಾತು: ಸಚಿವ ಬಿ.ಸಿ ನಾಗೇಶ್ ಅವರು ಮಾತನಾಡಿ, ಅತ್ಯಂತ ಅನುಭವ ಇರುವ ನಾಯಕರಲ್ಲಿ ರಮೇಶ್‍ಕುಮಾರ್ ಒಬ್ಬರು. ಅವರು ಆತ್ಮಸಾಕ್ಷಿ ಮೂಲಕ ಒಂದಷ್ಟು ನಿಜ ಹೇಳುವ ಪ್ರಯತ್ನ ಮಾಡಿದ್ದಾರೆ. ದೇಶಾದ್ಯಂತ ಪಕ್ಷದ ಸೋಲು, ಜನ ಪಕ್ಷವನ್ನು ಒಪ್ಪಿಕೊಳ್ಳದೇ ಇರುವಾಗ ಸತ್ಯ ಒಪ್ಪಿಕೊಂಡು ಜನರ ಮುಂದೆ ಹೋಗೋಣವೆಂದು ಈ ಸತ್ಯ ಒಪ್ಪಿರಬಹುದೇನೋ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.