ETV Bharat / state

ಖ್ಯಾತ ಪತ್ರಕರ್ತ ಬೆಳಗೆರೆ ನಿಧನ: ಸೂರ್ಯೋದಯಕ್ಕೂ ಮುನ್ನವೇ 'ರವಿ' ಅಸ್ತಂಗತ - ravi belagere latest news

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ನಂತರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ನಂತರ ಪತ್ರಕರ್ತ, ಲೇಖಕರಾಗಿ ಅಪಾರ ಜನಮನ್ನಣೆ ಪಡೆದಿದ್ದರು.

ravi belagere biography
ವಿಭಿನ್ನ ಬರವಣಿಗೆಯಿಂದ ಓದುಗರ ಮನದಲ್ಲಿ ನೆಲೆಸಿದ್ದ ಬೆಳಗೆರೆ!
author img

By

Published : Nov 13, 2020, 5:57 AM IST

Updated : Nov 13, 2020, 8:04 AM IST

ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ, ಹೆಸರಾಂತ ಬರಹಗಾರ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ತೀವ್ರ ಹೃದಯಾಘಾತದಿಂದ ಅಸುನೀಗಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ನಿನ್ನೆ (ಗುರುವಾರ) ರಾತ್ರಿ 12.30 ರ ಹೊತ್ತಿಗೆ ಹಾಯ್ ಬೆಂಗಳೂರು ಕಚೇರಿಯಲ್ಲಿರುವಾಗಲೇ ರವಿ ಬೆಳಗೆರೆಯವರಿಗೆ ಹೃದಯಾಘಾತ ಆಗಿತ್ತು. ತಕ್ಷಣ ಅವರನ್ನು ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಪರಿಶೀಲಿಸಿದಾಗ ಅಷ್ಟೊತ್ತಿಗೆ ಬೆಳಗೆರೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ರವಿ ಬೆಳಗೆರೆ ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೊದಲ ಪತ್ನಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಎರಡನೇ ಪತ್ನಿಗೆ ಒಬ್ಬ ಪುತ್ರನಿದ್ದಾನೆ. ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಆಸ್ಪತ್ರೆಯಿಂದ ರವಿ ಬೆಳಗೆರೆಯವರ ಪಾರ್ಥಿವ ಶರೀರವನ್ನು ಮನೆಗೆ ಮೊದಲು ಕರೆತರಲಾಗುವುದು‌ ನಂತರ ಪದ್ಮನಾಭನಗರದ ಪಾರ್ಥನಾ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Ravi belagere
ರವಿ ಬೆಳಗೆರೆ

ಬೆಳಗೆರೆ ಜೀವನ- ಸಾಧನೆ:

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ನಂತರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ರವಿ ಬೆಳಗೆರೆ ಕನ್ನಡದ ಪ್ರಸಿದ್ಧ ಪತ್ರಕರ್ತರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ.. ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದವರು. ಜೊತೆಗೆ ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, 'ಈಟಿವಿ ಕನ್ನಡ' ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು. ರವಿ ಬೆಳಗೆರೆ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.

Last Updated : Nov 13, 2020, 8:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.