ಬೆಂಗಳೂರು : ಪತ್ನಿಯನ್ನು ಆರೈಕೆ ಮಾಡುತ್ತಿದ್ದ ಯುವತಿ ಮೇಲೆ ಆತ್ಯಾಚಾರವೆಸಗಿರುವುದಾಗಿ ಆರೋಪಿಸಿ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರೆಸೆ ದೂರು ನೀಡಿದ್ದಾಳೆ. ಮತ್ತೊಂದೆಡೆ ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಮೇಲೆ ಆತ್ಯಾಚಾರವೆಸಗಿರುವುದಾಗಿ ಸುಳ್ಳು ಆರೋಪ ಹೊರಿಸಿ 70 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಪ್ರತಿದೂರು ನೀಡಿದ್ದಾರೆ. ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಿವೃತ್ತ ಅಧಿಕಾರಿ ಕರೆ ಮಾಡಿ ತಮ್ಮ ಪತ್ನಿಗೆ ಮರೆವು ಕಾಯಿಲೆಯಿದ್ದು, ಕೇರ್ ಟೇಕರ್ ಬೇಕಾಗಿದೆ ಎಂದು ಹೇಳಿ ತನ್ನನ್ನ ನಿಯೋಜಿಸಿದ್ದರು. ಇದರಂತೆ ಆವರ ಮನೆಯಲ್ಲಿ ಪತ್ನಿಗೆ ಆರೈಕೆ ಮಾಡುತ್ತಿದ್ದೆ. ಈ ವೇಳೆ ರಾತ್ರಿ ವೇಳೆ ನಾನು ಮಲಗಿರುವ ಕೊಠಡಿಗೆ ಬಂದು ಅವರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕೆಲ ದಿನಗಳ ಬಳಿಕ ಕುಡಿಯಲು ವಿದೇಶಿ ವೈನ್ ತಂದಿದ್ದರು. ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಿಸಿ ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ ಬೆರೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾರೆ. ಯಾರಿಗಾದರೂ ಹೇಳಿದರೆ ಸೆರೆಹಿಡಿದಿರುವ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಆತ್ಯಾಚಾರ ಆರೋಪ ಸುಳ್ಳು : ತಮ್ಮ ಮೇಲೆ ಬಂದಿರುವ ಆರೋಪ ಸುಳ್ಳಾಗಿದೆ. ಪತ್ನಿಗೆ ಕೇರ್ ಟೇಕರ್ ಆಗಿ ಕೆಲಸಕ್ಕೆ ನಿಯೋಜನೆ ಮಾಡಿದ್ದು ನಿಜ. ಕೆಲಸಕ್ಕೆ ಸೇರಿಕೊಂಡ ಬಳಿಕ ಅರಂಭದ ದಿನಗಳಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಳು. ಹೆಂಡತಿಯನ್ನು ಕೊನೆವರೆಗೂ ನೋಡಿಕೊಳ್ಳುವುದಾಗಿ ಹೇಳಿ ಮನೆಯ ಎಲ್ಲಾ ವಿಚಾರಗಳನ್ನ ತಿಳಿದುಕೊಂಡಿದ್ದಳು. ಬಳಿಕ ದೈಹಿಕ ಸಂಪರ್ಕ ಇಟ್ಟುಕೊಂಡು ಸಂಬಂಧ ಹೊಂದಿದ್ದೆವು. ಈ ಸಂದರ್ಭದಲ್ಲಿ ಹಂತ-ಹಂತವಾಗಿ 20 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಳು.
ಅನಂತರ ಮತ್ತೆ ಹಣಕ್ಕೆ ಪೀಡಿಸಿದ್ದಳು. ವಾಟ್ಸಾಪ್ನಲ್ಲಿ ಗರ್ಭಿಣಿಯಾಗಿರುವ ನಕಲಿ ಲ್ಯಾಬ್ ರಿಪೋರ್ಟ್ ಕಳುಹಿಸಿ 10 ಕೋಟಿ ಹಣ ನೀಡದಿದ್ದರೆ ಮಾಧ್ಯಮಗಳಲ್ಲಿ ಮಾನಹಾನಿ ಮಾಡುವುದಾಗಿ ಬೆದರಿಸಿ ತನ್ನಿಂದ 70 ಲಕ್ಷ ಹಣ ಬಲವಂತವಾಗಿ ಪಡೆದುಕೊಂಡಿದ್ದಾಳೆ ಎಂದು ನಿವೃತ್ತ ಅಧಿಕಾರಿ ತಾವು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಧಮ್ಕಿ; ಹೋಟೆಲ್ ಮಾಲೀಕ ಸೇರಿ ಮೂವರ ಬಂಧನ