ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಸೆಲೆಬ್ರಿಟಿಗಳ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇನ್ನು ಶ್ಯಾನೆ ಟಾಪ್ ಆಗವ್ಳೆ ಬೆಡಗಿ ಅದಿತಿ ಪ್ರಭುದೇವ ಸದ್ಯದಲ್ಲೇ ಉದ್ಯಮಿ ಜೊತೆ ಹಸೆಮಣೆ ಏರುತ್ತಿದ್ದಾರೆ. ಇದೀಗ ಕನ್ನಡ ಸಿನಿಮಾರಂಗಲ್ಲಿ ಹೊಸ ನಿರ್ದೇಶಕರು ಹಾಗೂ ನಟರಿಗೆ ಅವಕಾಶ ಕೊಡುತ್ತಿರುವ ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಮಗಳು ದೀಕ್ಷಾ ಪಿ ಅವರ ವಿವಾಹವೂ ಮಧು ಕೀರ್ತಿ ಎಂಬುವವರ ಜೊತೆ ಅದ್ಧೂರಿಯಾಗಿ ನೆರವೇರಿತು.

ಮದುವೆ ಸಮಾರಂಭಕ್ಕೆ ನಟರಾದ ಪ್ರಮೋದ್ ಶೆಟ್ಟಿ, ತಬಲನಾಣಿ, ಸಂಗೀತ ನಿರ್ದೇಶಕ ವಿ ಮನೋಹರ್, ನಿರ್ಮಾಪಕ ಉಮಾಪತಿ, ಪ್ರತಾಪ್ ಸಿಂಹ, ಎಂ ಕೃಷ್ಣಪ್ಪ ಸೇರಿದಂತೆ ವಿವಿಧ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ, ವಧುವರರನ್ನು ಆಶೀರ್ವದಿಸಿದ್ದಾರೆ. ಇನ್ನು ನಿರ್ಮಾಪಕ ಹೆಚ್ ಕೆ ಪ್ರಕಾಶ್ ನಿರ್ಮಾಣ ಮಾಡಿರೋ ಸ್ಪೂಕಿ ಕಾಲೇಜು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ಯೋಗರಾಜ್ ಭಟ್ಟರ ಪದವಿ ಪೂರ್ವ ಸಿನಿಮಾ ಡಿಸೆಂಬರ್ 30ಕ್ಕೆ ರಿಲೀಸ್‌ಗೆ ಸರ್ವ ಸಿದ್ಧತೆ