ಬೆಂಗಳೂರು: ಪವಿತ್ರ ಆರ್ಥಿಕತೆಗಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಆರನೇ ದಿನ ಪೂರೈಸಿದೆ.
ಪ್ರಸನ್ನ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗ್ರಾಮ ಸೇವಾ ಸಂಘ ತಿಳಿಸಿದೆ. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮುಂದಾಳತ್ವದಲ್ಲಿ ಪ್ರಮುಖ ನಾಗರಿಕರು, ಜನ ಚಳವಳಿಗಳ ಮುಖಂಡರು ಉಪವಾಸ ಕೈಗೊಂಡಿದ್ದಾರೆ.
ಸರ್ಕಾರಗಳು ಆರ್ಥಿಕತೆಗಾಗಿ ಪ್ರಕೃತಿಯನ್ನು ಹಾಳು ಮಾಡಿವೆ. ಇದ ಬಡವರನ್ನು ಮತ್ತೂ ಬಡವಾಗಿಸಿದೆ. ನಮ್ಮನ್ನೆಲ್ಲ ಯಂತ್ರಗಳನ್ನಾಗಿಸಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ಪಾಠ ಕಲಿಸುವ ರೀತಿ ಬಂದು ಆರ್ಥಿಕತೆ ಸಾಯುತ್ತಿದೆ. ಇನ್ನಾದರೂ ರಾಕ್ಷಸ ಆರ್ಥಿಕತೆಯ ತಂತ್ರಜ್ಞಾನ ಕಳಚಲು ಸಿದ್ಧರಿದ್ದೇವೆಯೇ? ಪ್ರಾಕೃತಿಕ ನಿಯಮದಂತೆ ಸಮಾನತೆ, ಸರಳತೆ ಆದರ್ಶಕ್ಕೆ ಬದ್ಧರಾಗಲು ಸಿದ್ಧರಿದ್ದೇವೆಯೇ ಎಂಬ ಪ್ರಶ್ನೆಗಳನ್ನು ಮಾಡುತ್ತಾ 'ಕರೊನಾ ಕುಚ್' ಅಭಿಯಾನದಡಿ ಉಪವಾಸ ಕೈಗೊಂಡಿದ್ದಾರೆ.