ETV Bharat / state

ರಮೇಶ್ ಜಾರಕಿಹೊಳಿ ರಾಜೀನಾಮೆ: ಇಂದೂ ಕೂಡ ತುಟಿ ಬಿಚ್ಚದ ಸಿಎಂ; ಸಚಿವರು ಹೇಳಿದ್ದಿಷ್ಟು..

ರಾಸಲೀಲೆ ಸಿಡಿ ಆರೋಪಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಸಚಿವರು ಪ್ರತಿಕ್ರಿಯಿಸಿದ್ದು, ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸಂಪುಟ ಸಭೆಗೆ ತೆರಳಿದರು.

Ramesh Zarakiholi Resignation
ಬಿಜೆಪಿ ಸಚಿವರ ಪ್ರತಿಕ್ರಿಯೆ
author img

By

Published : Mar 3, 2021, 4:09 PM IST

Updated : Mar 3, 2021, 4:36 PM IST

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಆರೋಪದ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಆಪಾದನೆ ಬಂದ ತಕ್ಷಣ ಅವರು ಆರೋಪಿಯಲ್ಲ. ಅದು ಆಪಾದನೆ ಆಗುತ್ತದೆ ಅಷ್ಟೇ. ರಮೇಶ್ ಜಾರಕಿಹೊಳಿ ತಮ್ಮ ಮೇಲೆ ಬಂದ ಆಪಾದನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಪ್ರತ್ಯಕ್ಷ ಕಂಡ್ರೂ ಪ್ರಮಾಣಿಸಿ ನೋಡಬೇಕು. ತನಿಖೆ ಆಗಲಿ‌ ಅಂತ ಅವರು ಹೇಳಿದ್ದಾರೆ. ಸತ್ಯಾಸತ್ಯತೆ ಹೊರಗೆ ಬಂದ ಬಳಿಕ ಕಾನೂನು ಪ್ರಕ್ರಿಯೆ ನಡೆಯುತ್ತದೆ ಎಂದರು.

ವಿಂಡೋ 1. ಪ್ರತಿಕ್ರಿಯೆ ನೀಡದ ಸಿಎಂ ಯಡಿಯೂರಪ್ಪ. ವಿಂಡೋ 2. ಸಚಿವರಾದ ಬಿ.ಸಿ.ಪಾಟೀಲ್‌, ಶ್ರೀರಾಮುಲು ಪ್ರತಿಕ್ರಿಯೆ

ಇದು ಯಾವುದೂ ಸತ್ಯ ಅಲ್ಲ ಅಂತ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ. ಸಾರ್ವಜನಿಕವಾಗಿ ಒಂದು ಮೌಲ್ಯವನ್ನು ಇಟ್ಟುಕೊಂಡಿರುವುದಾಗಿ ಹಾಗೂ ನನ್ನ ವಿರುದ್ಧದ ಆಪಾದನೆ ಸುಳ್ಳು. ನಾನು ತನಿಖೆಗೆ ತಯಾರಿದ್ದೇನೆ ಎಂದು ಅವರು ಹೇಳಿದ್ದಾರೆ. ಇದ್ಯಾವುದನ್ನು ನಾನು ಮಾಡಿಲ್ಲ ಎಂದಿದ್ದಾರೆ. ಇದೆಲ್ಲದರಿಂದ ಆಚೆ ಬರುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ತಿಳಿಸಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ‌ ಅಂಗೀಕರಿಸಿದ ಸಿಎಂ

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದು ಸಿಎಂ ಅಂಗೀಕಾರ ಮಾಡಿದ್ದಾರೆ. ರಾಜ್ಯಪಾಲರಿಗೆ ಈ ಪತ್ರವನ್ನು ಕಳಿಸ್ತಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಸಿಎಂ ಮೌನ

ಸಿಎಂ ಇಂದು ಕೂಡ ರಮೇಶ್ ಜಾರಕಿಹೊಳಿ ರಾಸಲೀಲೆ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಸಂಪುಟ ಸಭೆಗೆ ತೆರಳಿದರು.

Last Updated : Mar 3, 2021, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.