ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ FIR ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎನ್ನುವುದು ಬೆಳಕಿಗೆ ಬಂದಿದೆ. ನರೇಶ್ ಗೌಡ ಮತ್ತು ಶ್ರವಣ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್.ಐ.ಆರ್ ರದ್ದು ಮಾಡುವಂತೆ ಹೈಕೋರ್ಟ್ ಅರ್ಜಿ ಸಲ್ಲಿಕೆಯಾಗಿದೆ.
ಎಫ್.ಐ.ಆರ್ನಲ್ಲಿ ನಮ್ಮ ಹೆಸರಿಲ್ಲ. ಬ್ಲ್ಯಾಕ್ಮೇಲ್ ಮತ್ತು ವಸೂಲಿಯಲ್ಲಿ ಭಾಗಿಯಾಗಿಲ್ಲ. ಪ್ರಕರಣ ದಾಖಲಾಗಿ ವರ್ಷ ಕಳೆದಿದೆ. ಹೀಗಾಗಿ ಎಫ್.ಐ.ಆರ್ ರದ್ದು ಗೊಳಿಸುವಂತೆ ಕೋರಿ ಸಿ.ಆರ್.ಪಿ.ಸಿ 482 ಅಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಿದ ಹೈಕೋರ್ಟ್
ಪ್ರಕರಣ ಸಿಬಿಐಗೆ?: ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಹುದು ಎನ್ನುವ ಮಾಹಿತಿ ಹರಿದಾಡ್ತಿರುವ ಹೊತ್ತಿನಲ್ಲಿ ಇದೀಗ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರೋದು ಕುತೂಹಲ ಕೆರಳಿಸಿದೆ.
ಪ್ರಕರಣದ ಹಿನ್ನೆಲೆ: ಸಿಡಿ ವಿಚಾರವಾಗಿ ಸಚಿವ ಜಾರಕಿಹೋಳಿ ಸದಾಶಿವನಗರ ಠಾಣೆಯಲ್ಲಿ ಬ್ಲಾಕ್ಮೇಲ್ ದೂರು ದಾಖಲಿಸಿದ್ದರು. ಕಬ್ಬನ್ ಪಾರ್ಕ್ನಲ್ಲಿ ಸಂತ್ರಸ್ತೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಯುವತಿ ದಾಖಲಿಸಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಅತ್ಯಾಚಾರ ಕೇಸ್ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿದ್ದರು. ಸಿಡಿ ಕೇಸ್ನಿಂದಾಗಿ ಸಚಿವರಾಗಿದ್ದ ಜಾರಕಿಹೋಳಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.