ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಆಗಿರೋದು ಗೊತ್ತಿರುವ ವಿಷ್ಯ.. ಆದರೆ, ಕಳೆದ ಒಂದು ವರ್ಷದ ಹಿಂದೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕ್‌ಅಪ್ ಆದ ವಿಷ್ಯ ಕನ್ನಡ ಚಿತ್ರರಂಗ ಅಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ನ್ಯೂಸ್ ಆಗಿತ್ತು.
ಕೆಲ ತಿಂಗಳು ಹಿಂದೆ ಡಿಯರ್ ಕಾಮ್ರೇಡ್ ಪ್ರೆಸ್‌ಮೀಟ್‌ನಲ್ಲಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ನಾನು ಮಾತನಾಡೋಲ್ಲ ಅಂತಾ ಹೇಳಿದ್ರು. ರಶ್ಮಿಕಾ ಮಂದಣ್ಣ ಜೊತೆ ಮದುವೆ ಬ್ರೇಕ್‌ಅಪ್ ಆದಾಗಿನಿಂದ, ರಕ್ಷಿತ್ ಶೆಟ್ಟಿ ಮಾಧ್ಯಮದರವನ್ನ ಅವೈಡ್ ಮಾಡ್ತಿದ್ರು. ಈಗ ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೈಲರ್ ಲಾಂಚ್ ಟೈಮಲ್ಲಿ ರಕ್ಷಿತ್ ಶೆಟ್ಟಿ ಮದುವೆ ಬ್ರೇಕ್‌ಅಪ್ ಬಗ್ಗೆ ಪ್ರಶ್ನೆಯೊಂದು ಎದುರಾಯ್ತು.
ರಕ್ಷಿತ್ ಶೆಟ್ಟಿ ಈ ಬಗ್ಗೆ ರಿಯಾಕ್ಷನ್ ಕೇಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ.. ರಕ್ಷಿತ್‌ಗೆ ಮದುವೆ ಬ್ರೇಕ್ಅಪ್ ಪ್ರಶ್ನೆಗೆ ಉತ್ತರಿಸದೆ ಮುಗಿತಾ ಮುಗಿತಾ ಅಂತಾ ಚೇರ್ ಮೇಲೆನಿಂದ ಎದ್ದು ಬಿಟ್ರು. ರಕ್ಷಿತ್ ಶೆಟ್ಟಿ ಈ ನಡುವಳಿಕೆ ನೋಡಿದ್ರೆ, ರಶ್ಮಿಕಾ ಮಂದಣ್ಣ ಜೊತೆ ಬ್ರೇಕ್ಅಪ್ ಆಗಿರೋದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಿದೆ. ರಶ್ಮಿಕಾ ಮಂದಣ್ಣ ಯಾರು ಅನ್ನುವ ರೀತಿಯಲ್ಲಿ ವರ್ತಿಸಿದ್ರು.
ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಲಿಪ್‌ಲಾಕ್ ಸೀನ್, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕ್ಅಪ್‌ಗೆ ಕಾರಣ ಎನ್ನಲಾಗಿತ್ತು. ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಆಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ಲಿಪ್‌ಲಾಕ್ ಸೀನ್ ಮಾಡಬಾರದಿತ್ತು ಅಂತಾ ತರಾಟೆಗೆ ತೆಗೆದುಕೊಂಡಿದ್ರು.
ಇಷ್ಟೆಲ್ಲಾ ಸೀನ್ ಆದ್ಮಲೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಲ್ಲಿಯೂ ಖಾಸಗಿಯಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ಇವರಿಬ್ಬರ ಬ್ರೇಕ್‌ಅಪ್‌ಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಈಗ ರಕ್ಷಿತ್ ಶೆಟ್ಟಿ ರಿಯಾಕ್ಷನ್ ನೋಡಿದ್ರೆ, ರಶ್ಮಿಕಾ ಮಂದಣ್ಣ ಜೊತೆ ಬ್ರೇಕ್ಅಪ್ ಮಾಡಿಕೊಂಡಿರೋದಕ್ಕೆ ಈ ನಡುವಳಿಕೆ ನಿಜ ಅನಿಸೋಕೆ ಶುರುವಾಗಿದೆ.