ETV Bharat / state

ಆರ್​.ಆರ್.​ ನಗರ ಕ್ಷೇತ್ರದ ಚುನಾವಣೆ : ಈವರೆಗೂ ಇಲ್ಲಿ ಗೆದ್ದವರು?, ಸೋತವರ್ಯಾರು? - Karnataka by-election 2020

ಆರ್‌. ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಮುನಿರತ್ನ ಅವರಿಗಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಪಾಳಯಕ್ಕೆ ಜಿಗಿದರೂ ಅತಂತ್ರ ಪರಿಸ್ಥಿತಿಯಲ್ಲಿ ಮುನಿರತ್ನ ಇದ್ದರು. ತಮ್ಮ ಹೆಸರಿಗೆ ಬಂದಿದ್ದ ಅನರ್ಹ ಪಟ್ಟವನ್ನು ತೊಡೆದು ಹಾಕಲು ಅವರಿಗೆ ಕಾನೂನು ತೊಡಕಿನಿಂದಾಗಿ ಸಾಧ್ಯವಾಗಿರಲಿಲ್ಲ. ಇದರಿಂದ ಆಪರೇಷನ್‌ಗೆ ಒಳಗಾದರೂ ಅತಂತ್ರ ಪರಿಸ್ಥಿತಿಯಲ್ಲೇ ಇರಬೇಕಾದ ಸ್ಥಿತಿ ಅವರದ್ದಾಗಿತ್ತು. ಇದೀಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಅವರೇ ಸ್ಪರ್ಧೆ ಮಾಡಿದ್ದಾರೆ..

rajarajeshwar-nagar-constituency-election
ಆರ್​.ಆರ್​ ನಗರ ಕ್ಷೇತ್ರದ ಚುನಾವಣೆ
author img

By

Published : Nov 3, 2020, 12:11 PM IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಗೆ ಸೇರಿದ ರಾಜರಾಜೇಶ್ವರಿನಗರ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿದೆ. ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಬಿಜೆಪಿಯಿಂದ ಎಂ.ಶ್ರೀನಿವಾಸ್ ಅವರು 19,592 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಬಿಜೆಪಿಯ ಎಂ.ಶ್ರೀನಿವಾಸ್ 60187 ಮತ ಪಡೆದು ಗೆದ್ದು ಬೀಗಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪಿ.ಎನ್. ಕೃಷ್ಣಮೂರ್ತಿ ಅವರಿಗೆ 40595 ಮತಗಳು ಬಂದಿದ್ದರೆ, ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಹನುಮಂತರಾಯಪ್ಪ 36785 ಮತಗಳನ್ನು ಗಳಿಸಿದ್ದರು. ಸಿನಿಮಾರಂಗದಲ್ಲಿದ್ದ ಮುನಿರತ್ನ ಅವರು 2013ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು.

ರಾಜಕೀಯದಲ್ಲಿ ಪ್ರಬಲರಾಗಿದ್ದ ಅವರು, 2013 ರಲ್ಲಿ ನಡೆದ ಆರ್.ಆರ್.ನಗರ ವಿಧಾನಸಭಾ ಚುನಾವಣೆಯಲ್ಲಿ 18,813 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2008 ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ 2013 ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು 71064 ಪಡೆದುಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರು 50726 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರೆ, ಜೆಡಿಎಸ್ ನ ತಿಮ್ಮನಂಜಯ್ಯ ಅವರು 52251 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡರು.

2018ರ ವೇಳೆಗೆ ಮುನಿರತ್ನ ಅವರು ರಾಜಕೀಯ ಚಾಣಾಕ್ಷತನದಿಂದ ಮತ್ತು ಮತದಾರರ ವಿಶ್ವಾಸವನ್ನು ಹೆಚ್ವಿಸಿಕೊಂಡು ಕ್ಷೇತ್ರವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದರು. 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳು ಮತ್ತು ಇತರ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾದ ನಂತರ ಚುನಾವಣೆಯನ್ನು ಮುಂದೂಡಲಾಗಿತ್ತು. 2018ರ ಮೇ 28ರಂದು ಮತದಾನ ನಡೆದು ಮತ ಎಣಿಕೆ ಮೇ 31ರಂದು ನಡೆದು ಮುನಿರತ್ನ ಅವರು 25,492 ಮತಗಳ ಅಂತರದಿಂದ ಜಯಗಳಿಸಿದ್ದರು. 2018ರಲ್ಲಿ ಎಂ. ಶ್ರೀನಿವಾಸ್ ಅವರ ಬದಲಿಗೆ ತುಳಸಿ ಮುನಿರಾಜುಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.

2018ರಲ್ಲಿ ಕಾಂಗ್ರೆಸ್‌ನ ಮುನಿರತ್ನ ಅವರು 108064 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ 82572 ಮತಗಳನ್ನು ಗಳಿಸಿದ್ದರು. 2013 ರಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿಜೆಪಿ ಮಾಜಿ ಕಾರ್ಪೊರೇಟರ್ ಜಿ.ಹೆಚ್. ರಾಮಚಂದ್ರ ಅವರು 60360 ಮತಗಳನ್ನು ಗಳಿಸಿದ್ದರು.

ಚುನಾವಣೆಯ ಮೂರು ದಿನಗಳ ಮೊದಲು ಅಂದರೆ 2018 ಮೇ 9 ರಂದು ಜಾಲಹಳ್ಳಿ ಫ್ಲ್ಯಾಟ್‌ ವೊಂದರಲ್ಲಿ 9,567 ನಕಲಿ ಮತದಾರರ ಫೋಟೋ ಗುರುತಿನ ಚೀಟಿಗಳು ಪತ್ತೆಯಾದ್ದವು.ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಮುನಿರತ್ನ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.

2018ರಲ್ಲಿ ನಡೆದ ರಾಜರಾಜೇಶ್ವರಿ ನಗರ ಚುನಾವಣೆ ಫಲಿತಾಂಶದ ಬಗ್ಗೆ ತರಕಾರು ಅರ್ಜಿಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇತ್ತು. ಈ ಅರ್ಜಿಗಳು ಇತ್ಯರ್ಥವಾಗುವವರೆಗೂ ಉಪ ಚುನಾವಣೆ ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. ಅಷ್ಟರಲ್ಲೇ ನ್ಯಾಯಾಲಯದ ತೀರ್ಪು ಮುನಿರತ್ನ ಪರ ಬಂತು.

ಇನ್ನು, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮುನಿರತ್ನ ನಾಯ್ಡು ಅವರನ್ನು ಅಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಆದರೆ, 2018ರ ಚುನಾವಣೆ ಫಲಿತಾಂಶದ ತಕರಾರು ಅರ್ಜಿ ನ್ಯಾಯಾಲಯದಲ್ಲಿ ಇದ್ದ ಕಾರಣದಿಂದಾಗಿ ಉಪಚುನಾವಣೆ ನಡೆದಿರಲಿಲ್ಲ. ಇದೀಗ ಮುನಿರತ್ನ ಅವರಿಗೆ ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಕ್ಕಿದ್ದು, ಉಪಚುನಾವಣೆ ಘೋಷಣೆಯಾಗಿ ಇಂದು ಮತದಾನ ನಡೆಯುತ್ತಿದೆ.

ಆರ್‌. ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಮುನಿರತ್ನ ಅವರಿಗಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಪಾಳಯಕ್ಕೆ ಜಿಗಿದರೂ ಅತಂತ್ರ ಪರಿಸ್ಥಿತಿಯಲ್ಲಿ ಮುನಿರತ್ನ ಇದ್ದರು. ತಮ್ಮ ಹೆಸರಿಗೆ ಬಂದಿದ್ದ ಅನರ್ಹ ಪಟ್ಟವನ್ನು ತೊಡೆದು ಹಾಕಲು ಅವರಿಗೆ ಕಾನೂನು ತೊಡಕಿನಿಂದಾಗಿ ಸಾಧ್ಯವಾಗಿರಲಿಲ್ಲ. ಇದರಿಂದ ಆಪರೇಷನ್‌ಗೆ ಒಳಗಾದರೂ ಅತಂತ್ರ ಪರಿಸ್ಥಿತಿಯಲ್ಲೇ ಇರಬೇಕಾದ ಸ್ಥಿತಿ ಅವರದ್ದಾಗಿತ್ತು. ಇದೀಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಅವರೇ ಸ್ಪರ್ಧೆ ಮಾಡಿದ್ದಾರೆ.

ಈ ಕ್ಷೇತ್ರದಲ್ಲಿ 2008 ರಲ್ಲಿ ಒಟ್ಟು 4,54,909 ಮತದಾರರಿದ್ದರು. ಈಗ ಆರ್.ಆರ್.ನಗರದಲ್ಲಿ ಕ್ಷೇತ್ರದಲ್ಲಿ ಒಟ್ಟು 4,62,201 ಮತದಾರರಿದ್ದಾರೆ. ಅದರಲ್ಲಿ 2,41,049 ಪುರುಷರು, 2,21,073 ಮಹಿಳೆಯರು ಹಾಗೂ 79 ಇತರೆ ಮತದಾರರಿದ್ದಾರೆ.2013 ರಲ್ಲಿ ಶೇ. 56.82 ರಷ್ಟು ಮತದಾನವಾಗಿದ್ದರೆ, 2018 ರ ಚುನಾವಣೆಯಲ್ಲಿ ಆರ್‌ ಆರ್ ನಗರದಲ್ಲಿ ಶೇ. 56 ರಷ್ಟು ಮತದಾನವಾಗಿತ್ತು.

ಆರ್ ಆರ್ ನಗರ ಕ್ಷೇತ್ರದಲ್ಲಿ 2008, 2013, 2018 ಚುನಾವಣೆ ಮತ್ತು 2020 ರ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಪಡೆದ ಮತದ ವಿವರ ಹೀಗಿದೆ.

2008 : ಬಿಜೆಪಿ- ಎಂ.ಶ್ರೀನಿವಾಸ್- 60187.
ಕಾಂಗ್ರೆಸ್- ಪಿ.ಎನ್. ಕೃಷ್ಣಮೂರ್ತಿ-40595.
ಜೆಡಿಎಸ್- ಹನುಮಂತರಾಯಪ್ಪ- 36785.
2013: ಕಾಂಗ್ರೆಸ್- ಮುನಿರತ್ನ ನಾಯ್ಡು- 71064.
ಬಿಜೆಪಿ- ಎಂ.ಶ್ರೀನಿವಾಸ್-50726.
ಜೆಡಿಎಸ್- ತಿಮ್ಮನಂಜಯ್ಯ- 52251.
2018: ಕಾಂಗ್ರೆಸ್- ಮುನಿರತ್ನ ನಾಯ್ಡು- 108064.
ಬಿಜೆಪಿ- ತುಳಸಿ ಮುನಿರಾಜುಗೌಡ- 82572.
ಜೆಡಿಎಸ್ - ಜಿ.ಎಚ್. ರಾಮಚಂದ್ರ- 60360.

ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ, ಪಕ್ಷೇತರರು ಸೇರಿದಂತೆ 16 ಮಂದಿ ಅಖಾಡದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.