ಬೆಂಗಳೂರು: ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಹಿಂಭಾಗ ಜಲಮಂಡಳಿ ಕಳೆದ 2 ತಿಂಗಳ ಹಿಂದೆ ಕಾಮಗಾರಿಯೊಂದಕ್ಕೆ ಸುಮಾರು 15 ಅಡಿ ಉದ್ದದ ರಾಜಕಾಲುವೆ ಗೋಡೆ ಒಡೆದು ಹಾಕಿತ್ತು. ಭಾನುವಾರ ರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ರಾಜಕಾಲುವೆ ನೀರಿನ ಮಟ್ಟ ಏರಿಕೆಯಾಗಿ ಅಪಾರ್ಟ್ಮೆಂಟ್ ಆವರಣಕ್ಕೆ 3 ಅಡಿವರೆಗೆ ನೀರು ನುಗ್ಗಿದೆ.
ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಸಿಲುಕಿದವು. ಏಕಾಏಕಿ ಅಪಾರ್ಟ್ಮೆಂಟ್ ಆವರಣಕ್ಕೆ ನೀರು ನುಗ್ಗಿದ ಪರಿಣಾಮ ಸ್ಥಳೀಯರು ಭಯ ಭೀತರಾಗಿದ್ದರು. ರಾಜಕಾಲುವೆಯಲ್ಲಿ ಜಲಮಂಡಳಿ ಒಳಚರಂಡಿ ನೀರಿನ ಪೈಪ್ ಅಳವಡಿಸಲು ವಾಹನ ಹೋಗಲು ಅನುವಾಗುವಂತೆ ರಾಜಕಾಲುವೆ ಗೋಡೆಯನ್ನು ಒಡೆದು ಹಾಕಿತ್ತು. ಆದರೆ, ಕಾಮಗಾರಿ ಕೆಲಸದ ನಂತರ ಮರಳಿನ ಚೀಲ ಹಾಕದ ಪರಿಣಾಮ ಕಾಲುವೆ ನೀರು ಕ್ರೀಡಾ ಗ್ರಾಮಕ್ಕೆ ನುಗ್ಗಿದೆ.
ಮುಂದೆ ಇದೇ ರೀತಿ ಪುನರಾವರ್ತನೆಯಾದರೆ ಎನ್ಜಿವಿ ಗ್ರಾಮದ ನಿವಾಸಿಗಳು ಸಂಕಷ್ಠಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಜಲಮಂಡಳಿ ಅಧಿಕಾರಿಗಳು ಹಾಗೂ ಬಿಬಿಎಂಪಿ ಬೃಹತ್ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಧಾರಾಕಾರ ಮಳೆಗೆ ಅವಾಂತರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಹೈ ಅಲರ್ಟ್