ETV Bharat / state

ಹಗಲು ಹೊತ್ತು ಪೇಂಟಿಂಗ್ ಕೆಲಸ, ರಾತ್ರಿ ವೇಳೆ ಬೈಕ್ ಕಳ್ಳತನ: ಬಲೆಗೆ ಬಿದ್ದ ಕಿರಾತಕ - ಬೆಂಗಳೂರು ಕ್ರೈಮ್​ ಲೇಟೆಸ್ಟ್ ನ್ಯೂಸ್

ರಾಜಗೋಪಾಲನಗರ ಪೊಲೀಸರು ನಗರದಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

bike theft
ಬೈಕ್​ ಕಳ್ಳ ಬಂಧನ
author img

By

Published : Jul 8, 2021, 3:32 PM IST

ಬೆಂಗಳೂರು: ಬೆಳಗ್ಗೆ ಪೇಂಟಿಂಗ್​ ಕೆಲಸ ಮಾಡಿ, ರಾತ್ರಿವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಕಸ್ತೂರಿ ನಗರ ನಿವಾಸಿ ಮಾರುತಿ ಎಂಬಾತ ಬಂಧಿತ ಆರೋಪಿ.

ಮಾರುತಿ ತುಮಕೂರಿನ ಮಧುಗಿರಿಯವನಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿ ಪೇಂಟಿಂಗ್​ ಕೆಲಸ ಮಾಡುತ್ತಿದ್ದ. ಜುಲೈ 06 ರಂದು ರಾಜಗೋಪಾಲನಗರ ಪೊಲೀಸರು ವಾಹನ ತಪಾಸಣೆ ವೇಳೆ ಬೈಕ್ ಚಲಾಯಿಸುತ್ತಿದ್ದ ಮಾರುತಿಯನ್ನು ಅಡ್ಡಗಟ್ಟಿದ್ದಾರೆ. ಪರಿಶೀಲನೆ ನಡೆಸಿದಾಗ ದಾಖಲಾತಿ ಇಲ್ಲದಿರುವುದು ಕಂಡು ಬಂದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿ ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಕಳ್ಳತನ ಮಾಡಿ ಸುಲಭವಾಗಿ ನಕಲಿ ಕೀ ಮಾಡಿಕೊಂಡು ವಾಹನಗಳನ್ನು ಮಾರಾಟ ಮಾಡುತ್ತಿದ್ದ. ಪೀಣ್ಯ, ಕಾಮಾಕ್ಷಿಪಾಳ್ಯ, ಆರ್‌ಎಂಸಿ ಯಾರ್ಡ್, ಅನ್ನಪೂರ್ಣೇಶ್ವರಿ ನಗರ ಹಾಗೂ ಕೊರಟೆಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ: ಬಿಎಸ್​ವೈಗೆ ಬಿಗ್​ ರಿಲೀಫ್

ಬಂಧಿತನಿಂದ ಸುಮಾರು 4 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನ ಹಾಗೂ 8 ಮೊಬೈಲ್ ಫೋನ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.