ಬೆಂಗಳೂರು: ಅಪಘಾತಗಳಿಗೆ ಒಳಗಾದ ರೈಲ್ವೇ ಪ್ರಯಾಣಿಕರಿಗೆ ಮತ್ತು ಪ್ರಯಾಣಿಕರ ಕುಟುಂಬಗಳಿಗೆ ಪರಿಹಾರ ಪಾವತಿಸುವ ಕುರಿತು ತ್ವರಿತ ನಿರ್ಧಾರಗಳ ಮೂಲಕ ಶೀಘ್ರ ನ್ಯಾಯ ಒದಗಿಸುವ ದೃಷ್ಟಿಯಿಂದ ಲೋಕ್ ಅದಾಲತ್ ನಡೆಸಲಾಯಿತು.
ರೈಲ್ವೆ ಹಕ್ಕುಗಳ ನ್ಯಾಯಮಂಡಳಿಯ ಬೆಂಗಳೂರು ನ್ಯಾಯಪೀಠದ ಸದಸ್ಯೆ ತಸ್ನೀಮ್ ರಸೂಲ್ ಬೋಸ್ ಲೋಕ್ ಅದಾಲತ್ನ ಅಧ್ಯಕ್ಷತೆ ವಹಿಸಿದ್ದರು.
ಲೋಕ ಅದಾಲತ್ನಲ್ಲಿ ವಿಚಾರಣೆಗಾಗಿ 26 ಪ್ರಕರಣಗಳನ್ನು ನೈರುತ್ಯ ರೈಲ್ವೆ, ಕೇಂದ್ರ ರೈಲ್ವೆ ಮತ್ತುದಕ್ಷಿಣ ಮಧ್ಯ ರೈಲ್ವೆ ಗುರುತಿಸಿವೆ. 13 ಸಾವಿರ ಪ್ರಕರಣಗಳು ಮತ್ತು 5 ಗಾಯ ಪ್ರಕರಣಗಳನ್ನು ನಿರ್ಧರಿಸಿ, ಒಟ್ಟು ಪರಿಹಾರ 1,31,85,000 ರೂಪಾಯಿ ನೀಡಲಾಯಿತು.
ಲೋಕ ಅದಾಲತ್ನಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಹಕ್ಕುಗಳ ಅಧಿಕಾರಿ ಎನ್ ರಮೇಶ್, ವಾಣಿಜ್ಯ ವ್ಯವಸ್ಥಾಪಕ ಹರಿ ಕುಮಾರ್ ಸೇರಿದಂತೆ ನ್ಯಾಯಪೀಠದ ರಿಜಿಸ್ಟಾರ್ ಪಾಲ್ಗೊಂಡಿದ್ದರು.