ಬೆಂಗಳೂರು: ಹೊಟ್ಟೆಪಾಡಿಗಾಗಿ ಬೆಂಗಳೂರು ಬಾಗಿಲು ತಟ್ಟವವರು ಲಕ್ಷಾಂತರ ಮಂದಿ ಇದ್ದಾರೆ. ಹೊರ ರಾಜ್ಯಗಳಾದ ಬಿಹಾರ, ಯುಪಿ, ರಾಜಸ್ಥಾನ, ಜಾರ್ಖಂಡ್ ಹೀಗೆ ಹತ್ತಾರು ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರುತ್ತಾರೆ. ಹೀಗೆ ಬಂದವರಿಗೆ ಶಾಕ್ ಕೊಟ್ಟಿದ್ದೇ ಕೊರೊನಾ ವೈರಸ್. ಹೌದು, ಹುಟ್ಟಿದ ಊರು ಬಿಟ್ಟು ಉದ್ಯೋಗ ಹುಡುಕಿಕೊಂಡು ಬಂದವರು ಕೊರೊನಾ-ಲಾಕ್ಡೌನ್ ನಡುವೆ ಸಿಲುಕಿ ಒದ್ದಾಡಿದರು. ನಮ್ಮೂರಿಗೆ ನಮ್ಮನ್ನ ಕಳುಹಿಸಿಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದರು.
ಹೀಗಾಗಿಯೇ ರಾಜ್ಯ ಸರ್ಕಾರ ದೂರದ ಊರಿಗಳಿಗೆ ರೈಲು ವ್ಯವಸ್ಥೆ ಮಾಡಿತ್ತು. ಹಾಗಿದ್ದರೆ ದೂರದ ಊರಿಗೆ ರೈಲಿನಲ್ಲಿ ಹೋಗುವವರಿಗೆ ಆಹಾರ ಪೂರೈಕೆ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಶನಿವಾರ ಕೂಡ ವಲಸೆ ಕಾರ್ಮಿಕರಿಗಾಗಿ ಮೂರು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 3,598 ಪ್ರಯಾಣಿಕರು ಒರಿಸ್ಸಾ ಮತ್ತು ಲಾಖನೌಗೆ ತೆರಳಿದರು.
ಇನ್ನು ಇವರಿಗೆ ರೈಲ್ವೆ ಇಲಾಖೆಯು ಬಿಸಿಯಾದ ಆಹಾರ, 8 ಚಪಾತಿ ಜೊತೆಗೆ ಉಪ್ಪಿನಕಾಯಿ, 2 ಬಿಸ್ಕೆಟ್ ಪ್ಯಾಕೇಟ್, 2 ನೀರಿನ ಬಾಟೆಲ್ ಹಾಗೂ ಮಜ್ಜಿಗೆ ಪ್ಯಾಕೇಟ್ ನೀಡಿದೆ. ಇನ್ನು ಅಭುದ್ಯ ಎಂಬ ಎನ್ಜಿಒ ಸಂಸ್ಥೆ ವಲಸೆ ಪ್ರಯಾಣಿಕರಿಗಾಗಿ ಬಿಸ್ಕತ್ ಪ್ಯಾಕೇಟ್ ನೀಡಿದೆ.