ETV Bharat / state

ಬೆಂಗಳೂರಲ್ಲಿ ಮಾದಕ ವಸ್ತು ಮಾರಾಟಗಾರರ ಮೇಲೆ ಮುಂದುವರೆದ ದಾಳಿ: ಹಲವರ ಬಂಧನ - ಗೃಹ ಸಚಿವ ಬಸವರಾಜ್ ಬೊಮ್ಮಯಿ

ಗೃಹ ಸಚಿವ ಬಸವರಾಜ ಬೊಮ್ಮಯಿ ಮಾದಕ ವಸ್ತು ಮಾರಟ ಮಾಡುವವರು ಹಾಗೂ ಸೇವನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ರು. ಹಾಗಾಗಿ ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಗಂಭೀರವಾಗಿ ತೆಗೆದುಕೊಂಡು ದಾಳಿ ಮುಂದುವರೆಸಲಾಗಿದೆ.

drug
drug
author img

By

Published : Jul 27, 2020, 2:51 PM IST

ಬೆಂಗಳೂರು: ಕೊರೊನಾ ಸೋಂಕಿನ ನಡುವೆ ಪೊಲೀಸರ ಕಣ್ಣು ತಪ್ಪಿಸಿ ಮಾದಕ ವಸ್ತುಗಳನ್ನ ಮಾರಾಟ ‌ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ಡಾ. ರೋಹಿಣಿ ಕಟೋಚ್ ನೇತೃತ್ವದ ತಂಡ ವಿಶೇಷವಾಗಿ ಕಾರ್ಯಾಚರಣೆ ನಡೆಸಿ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾರ್ಯಾಚರಣೆಗೆ ಇಳಿದು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಟ್ಟು 19 ಆರೋಪಿಗಳನ್ನ ಬಂಧಿಸಿದ್ದಾರೆ.

raid on drug sellers
ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು 18 ಠಾಣಾ ವ್ಯಾಪ್ತಿಗಳಲ್ಲಿ ಗಾಂಜಾ ಮಾರಟ ಮಾಡುತ್ತಿದ್ದು, ಸದ್ಯ ಆರೋಪಿಗಳ ಮೇಲೆ ಸಂಬಂಧಿಸಿದ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿತರಿಂದ ಒಟ್ಟು 1 ಕೆಜಿ 100 ಗ್ರಾಂ ಗಾಂಜಾ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

raid on drug sellers
ಬಂಧಿತ ಆರೋಪಿಗಳು

ಪೂರ್ವ ವಿಭಾಗದ ಕಾರ್ಯಾಚರಣೆ

ಪೂರ್ವ ವಿಭಾಗದಲ್ಲಿ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಒಟ್ಟು 14 ಆರೋಪಿಗಳ ಬಂಧನ ಮಾಡಿ 29 ಪ್ರಕರಣ ಪತ್ತೆ ಹಚ್ಚಲಾಗಿದೆ. ಬಂಧಿತರ ಮೇಲೆ ಸಂಬಂಧಿಸಿದ ಠಾಣೆಯಲ್ಲಿ ದೂರು ದಾಖಲಿಸಿ‌ ಮಾದಕ ವಸ್ತು ಜಪ್ತಿ ಮಾಡಲಾಗಿದೆ‌.

raid on drug sellers
ಬಂಧಿತ ಆರೋಪಿಗಳು

ಇತ್ತೀಚೆಗೆ ಸರ್ಕಾರ ಮಾದಕ ವಸ್ತುಗಳ ‌ಮಾರಾಟ ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಿರ್ಧಾರ ತೆಗೆದುಕೊಂಡಿತ್ತು. ಮಾದಕ ವಸ್ತು ವಿರೋಧಿ ದಿನಾಚರಣೆಯಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಮಾದಕ ವಸ್ತು ಮಾರಟ ಮಾಡುವವರು ಹಾಗೂ ಸೇವನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹಾಗೂ ‌ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸೂಚನೆ ನೀಡಿದ್ರು. ಸದ್ಯ ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಗಂಭೀರವಾಗಿ ತೆಗೆದುಕೊಂಡು ದಾಳಿ ಮುಂದುವರೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.